ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಮಕ್ಕಳ ಪಾಲನೆ

ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಎಷ್ಟು ಪ್ರಾಮುಖ್ಯ?

ಮಕ್ಕಳಿಗೆ ಹೆತ್ತವರ ಮಾರ್ಗದರ್ಶನ ಎಷ್ಟು ಪ್ರಾಮುಖ್ಯ?

 ನಿಮಗೆ ಗೊತ್ತಿರಬೇಕಾದ ವಿಷ್ಯಗಳು

 ಕೆಲವು ಸಂಸ್ಕೃತಿಗಳಲ್ಲಿ ಮಕ್ಕಳು ಅಪ್ಪ ಅಮ್ಮನ ಜೊತೆ ಚೆನ್ನಾಗಿರ್ತಾರೆ. ಏನೇ ಸಲಹೆ ಬೇಕಿದ್ರೂ ಮುಚ್ಚು ಮರೆಯಿಲ್ಲದೆ ಮಾತಾಡ್ತಾರೆ. ಇನ್ನೂ ಕೆಲವು ಸಂಸ್ಕೃತಿಗಳಲ್ಲಿ ಮಕ್ಕಳು ಸಲಹೆಗಳಿಗಾಗಿ ತಮ್ಮ ಹೆತ್ತವರ ಬದ್ಲು ಫ್ರೆಂಡ್ಸ್‌ ಹತ್ರ ಹೋಗ್ತಾರೆ.

 ಈ ತರ ಫ್ರೆಂಡ್ಸ್‌ ಹತ್ರ ಸಲಹೆ ಕೇಳೋವ್ರು ತಮ್ಮ ಅಪ್ಪ ಅಮ್ಮನ ಮಾರ್ಗದರ್ಶನಕ್ಕೆ ಒಂಚೂರು ಬೆಲೆ ಕೊಡಲ್ಲ. ಹದಿಪ್ರಾಯಕ್ಕೆ ಬರೋಷ್ಟರಲ್ಲಿ ಇಂಥಾ ಮಕ್ಕಳು ಅವರ ಹೆತ್ತವರ ಹದ್ದುಬಸ್ತಲ್ಲಿ ಇರಲ್ಲ. ಇದೇನೂ ಆಶ್ಚರ್ಯ ಪಡೋ ವಿಷ್ಯ ಅಲ್ಲ! ಯಾಕಂದ್ರೆ ಮಕ್ಕಳು ಹೆಚ್ಚು ಸಮಯಾನ ತಮ್ಮ ಫ್ರೆಂಡ್ಸ್‌ ಜೊತೆನೇ ಕಳೀತಾರೆ. ಅದು ಅವ್ರ ಮೇಲೆ ಎಷ್ಟು ಪ್ರಭಾವ ಬೀರುತ್ತೆ ಅಂದ್ರೆ ಫ್ರೆಂಡ್ಸೇ ಅವ್ರ ಅಪ್ಪ ಅಮ್ಮ ಆಗ್ಬಿಟಿರ್ತಾರೆ.

 ಮಕ್ಕಳು ಯಾಕೆ ತಮ್ಮ ಹೆತ್ತವರಿಗಿಂತ ಫ್ರೆಂಡ್ಸ್‌ನ ಜಾಸ್ತಿ ಹಚ್ಕೊತಾರೆ? ಅದಕ್ಕೆ ಏನು ಕಾರಣ ಅಂತ ನೊಡೋಣ.

  •   ಸ್ಕೂಲ್‌. ಮಕ್ಕಳು ತುಂಬ ಸಮಯಾನ ಫ್ರೆಂಡ್ಸ್‌ ಜೊತೆನೇ ಕಳೆಯೋದ್ರಿಂದ ಅವ್ರನ್ನೇ ತುಂಬ ಹಚ್ಕೊಂಡಿರ್ತಾರೆ. ಅದಕ್ಕೆ ಅಪ್ಪ ಅಮ್ಮನಿಗಿಂತ ಫ್ರೆಂಡ್ಸ್‌ನ ಖುಷಿಪಡಿಸೋಕೆ ಇಷ್ಟಪಡ್ತಾರೆ. ಮಕ್ಕಳು ಹದಿಪ್ರಾಯಕ್ಕೆ ಬಂದಾಗ ಇಂಥಾ ಮನೋಭಾವ ಜಾಸ್ತಿ ಆಗುತ್ತೆ.

    ಫ್ರೆಂಡ್ಸ್‌ ಮಾತಿಗಿಂತ ಅಪ್ಪ ಅಮ್ಮನ ಮಾತೇ ಮಕ್ಕಳಿಗೆ ಮುಖ್ಯ ಆಗಿರಬೇಕು

  •   ಹೆತ್ತವ್ರು ಮಕ್ಕಳಿಗೆ ಸಮಯ ಕೊಡಲ್ಲ. ತುಂಬ ಕುಟುಂಬಗಳಲ್ಲಿ ಹೆತ್ತವರು ಇಬ್ರೂ ಕೆಲಸ ಮಾಡೋದ್ರಿಂದ ಮಕ್ಕಳು ಮನೆಗೆ ಬಂದಾಗ ಮನೆ ಖಾಲಿ ಇರುತ್ತೆ.

  •   ಟೀನೇಜ್‌ ಲೈಫ್‌ ಸ್ಟೈಲ್‌. ಮಕ್ಕಳು ಹದಿಪ್ರಾಯಕ್ಕೆ ಬರೋಷ್ಟರಲ್ಲಿ ಅವರ ಬಟ್ಟೆ, ಮಾತು, ನಡವಳಿಕೆ, ಯೋಚ್ನೆ ಎಲ್ಲಾ ಅವ್ರ ವಯಸ್ಸಿನ ಮಕ್ಕಳ ತರಾನೇ ಬದಲಾಗಿಬಿಟ್ಟಿರುತ್ತೆ. ಇದು ಅವರನ್ನ ಎಷ್ಟು ಬದಲಾಯಿಸುತ್ತೆ ಅಂದ್ರೆ, ತಮ್ಮ ಬಗ್ಗೆ ಅಪ್ಪ ಅಮ್ಮನಿಗೆ ಏನು ಅನ್ಸುತ್ತೆ ಅನ್ನೋದಕ್ಕಿಂತ ಅವ್ರ ಫ್ರೆಂಡ್ಸ್‌ಗೆ ಏನು ಅನ್ಸುತ್ತೆ ಅನ್ನೋದು ಅವ್ರಿಗೆ ಮುಖ್ಯ ಆಗಿರುತ್ತೆ.

  •   ವ್ಯಾಪಾರ. ವ್ಯಾಪಾರಸ್ಥರು ಯುವಕರನ್ನ ಮನಸ್ಸಲ್ಲಿಟ್ಟು ವಸ್ತುಗಳನ್ನ ಮತ್ತು ಮನೋರಂಜನೆಯನ್ನ ತಯಾರಿಸ್ತಾರೆ. ಇದು ಹೆತ್ತವರು ಮತ್ತು ಮಕ್ಕಳ ಮಧ್ಯ ಅಂತರ ತರೋದ್ರಿಂದ ಒಬ್ರಿಗೊಬ್ರು ಅರ್ಥ ಮಾಡ್ಕೊಳ್ಳೋದು ಕಷ್ಟ ಆಗ್ತಿದೆ. “ಟೀನೇಜ್‌ ಲೈಫ್‌ ಸ್ಟೈಲ್‌ ಇಲ್ಲಾ ಅಂದಿದ್ರೆ ದೊಡ್ಡ ದೊಡ್ಡ ಕಂಪನಿಗಳೆಲ್ಲ ನೆಲ ಕಚ್ತಿತ್ತು” a ಅಂತ ಡಾಕ್ಟರ್‌ ರಾಬರ್ಟ್‌ ಎಪ್‌ಸ್ಟೈನ್‌ ಹೇಳಿದ್ದಾರೆ.

 ನೀವು ಮಾಡಬೇಕಾದ ವಿಷ್ಯಗಳು

  •   ಮಕ್ಕಳ ಜೊತೆ ನಿಮ್ಮ ಬಂಧ ಬಲವಾಗಿರಲಿ.

     ಬೈಬಲ್‌ ಹೇಳೋ ಮಾತು: “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.”—ಧರ್ಮೋಪದೇಶಕಾಂಡ 6:6, 7.

     ಫ್ರೆಂಡ್ಸ್‌ ಬರೀ ಫ್ರೆಂಡ್ಸೇ. ಅವ್ರು ನಿಮ್ಮ ಜಾಗ ತುಂಬೋಕಾಗಲ್ಲ, ಅವರಿಗೆ ಮಾರ್ಗದರ್ಶನ ಕೊಡೋಕೂ ಆಗಲ್ಲ. ಆದ್ರೆ ಒಂದು ಒಳ್ಳೇ ವಿಷ್ಯ ನಿಮ್ಗೆ ಗೊತ್ತಾ? ತುಂಬ ಮಕ್ಕಳು ಮತ್ತು ಹದಿಪ್ರಾಯದವ್ರು ತಮ್ಮ ಹೆತ್ತವರನ್ನ ಗೌರವಿಸ್ತಾರೆ ಮತ್ತು ಅವ್ರನ್ನ ಖುಷಿಪಡಿಸೋಕೆ ಇಷ್ಟಪಡ್ತಾರೆ. ನಿಮ್ಗೆ ನಿಮ್ಮ ಮಕ್ಕಳ ಜೊತೆ ಒಳ್ಳೆ ಸಂಬಂಧ ಇದ್ರೆ ಫ್ರೆಂಡ್ಸ್‌ಗಿಂತ ನೀವೇ ಅವರ ಪ್ರಪಂಚ ಆಗಿರ್ತೀರ.

     “ಅಡಿಗೆ ಮಾಡುವಾಗ, ಕ್ಲೀನ್‌ ಮಾಡುವಾಗ ಅವ್ರನ್ನು ನಿಮ್ಮ ಜೊತೆ ಸೇರಿಸಿಕೊಳ್ಳಿ, ಸ್ಕೂಲ್‌ ಹೋಮ್‌ ವರ್ಕ್‌ ಮಾಡೋವಾಗ ಹೀಗೆ ಬೇರೆ ಏನಾದ್ರೂ ಕೆಲ್ಸ ಮಾಡೋವಾಗ ಅವರ ಜೊತೆ ಸಮ್ಯ ಕಳೆಯಿರಿ. ಆಟ ಆಡಿ, ತಮಾಷೆ ಮಾಡಿ, ಒಟ್ಟಿಗೆ ಮೂವಿ ಅಥ್ವಾ ಟಿ.ವಿ ನೋಡಿ. ಹಾಗಂತ ಗಂಟೆಗಟ್ಟಲೆ ಅವ್ರ ಜೊತೆ ಇರಬೇಕು ಅಂತಿಲ್ಲ, ಆಗಾಗ ನಿಮ್ಮಿಂದ ಎಷ್ಟು ಆಗುತ್ತೋ ಅಷ್ಟು ಸಮ್ಯ ಕೊಟ್ಟರೆ ನಿಮ್ಮಿಬ್ಬರ ಸಂಬಂಧನೂ ಚೆನ್ನಾಗಿರುತ್ತೆ.”—ಲೊರೆನ್‌.

  •   ಅವ್ರ ಸ್ನೇಹ ಸೀಮಿತವಾಗದಿರಲಿ.

     ಬೈಬಲ್‌ ಹೇಳೋ ಮಾತು: “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ.”—ಜ್ಞಾನೋಕ್ತಿ 22:15.

     ನಿಮ್ಮ ಮಕ್ಕಳಿಗೆ ಜಾಸ್ತಿ ಫ್ರೆಂಡ್ಸ್‌ ಇರೋದನ್ನ ನೋಡಿ ನಿಮ್ಗೆ ಖುಷಿಯಾಗಬಹುದು, ಆದ್ರೆ ಎಚ್ಚರವಾಗಿರಿ. ಮಕ್ಕಳು ಪ್ರೌಢರಾಗಬೇಕಂದ್ರೆ ಎಲ್ಲಾ ವಯಸ್ಸಿನವರನ್ನ ಫ್ರೆಂಡ್ಸ್‌ ಮಾಡ್ಕೊಬೇಕು. ಮಕ್ಕಳಿಗೆ ಮಾರ್ಗದರ್ಶನೆಯನ್ನ ಹೆತ್ತವರಿಗಿಂತ ಚೆನ್ನಾಗಿ ಇನ್ಯಾರಿಂದನೂ ಕೊಡೋಕೆ ಸಾಧ್ಯ ಇಲ್ಲ.

     “ಫ್ರೆಂಡ್ಸ್‌ಗೆ ಕೆಲವು ವಿಷ್ಯಗಳ ಬಗ್ಗೆ ಮಾತ್ರ ಜ್ಞಾನ ಇರುತ್ತೆ, ಆದ್ರೆ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋಕೆ ಅವ್ರಿಗೆ ಗೊತ್ತಿರಲ್ಲ, ಅನುಭವ ಕಮ್ಮಿ. ಹಾಗಾಗಿ ಒಳ್ಳೇ ನಿರ್ಧಾರ ಮಾಡೋಕೆ ಅವ್ರು ಬೇರೆಯವರಿಗೆ ಸಹಾಯ ಮಾಡಕ್ಕಾಗಲ್ಲ. ಜೀವನದಲ್ಲಿ ಮಕ್ಕಳು ಚೆನ್ನಾಗಿ ಬೆಳೆದು ಪ್ರೌಢರಾಗಬೇಕಂದ್ರೆ ಅಪ್ಪ ಅಮ್ಮನ ಮಾತು ಕೇಳಲೇಬೇಕು.”—ನಾಡ್ಯ.

  •   ಒಳ್ಳೇ ಸಲಹೆ ಕೊಡಿ.

     ಬೈಬಲ್‌ ಹೇಳೋ ಮಾತು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.”—ಜ್ಞಾನೋಕ್ತಿ 13:20.

     ಮಕ್ಕಳು ದೊಡ್ಡವರಾದ ಮೇಲೂ ಅವ್ರ ಜೊತೆ ಸಮಯ ಕಳೀರಿ. ಇದ್ರಿಂದ ತುಂಬ ಪ್ರಯೋಜನ ಇದೆ. ಅವ್ರಿಗೆ ಒಳ್ಳೇ ಮಾದರಿಯಾಗಿರಿ.

     “ಮಕ್ಕಳಿಗೆ ಹೆತ್ತವರಿಗಿಂತ ಒಳ್ಳೇ ಮಾದರಿ ಬೇರೆ ಯಾರೂ ಇಲ್ಲ. ಅಪ್ಪ ಅಮ್ಮಾಗೆ ಗೌರವ ಕೊಡಬೇಕು ಅಂತ ಚಿಕ್ಕ ವಯಸ್ಸಿಂದಾನೇ ಹೇಳಿಕೊಟ್ರೆ ದೊಡ್ಡವರಾದ ಮೇಲೂ ಅವ್ರು ಹಾಗೇ ನಡ್ಕೊತ್ತಾರೆ.”—ಕ್ಯಾತ್ರೀನ್‌.

a ಟೀನ್‌ 2.0—ಸೇವಿಂಗ್‌ ಅವರ್‌ ಚಿಲ್ಡ್ರನ್‌ ಆ್ಯಂಡ್‌ ಫ್ಯಾಮಿಲೀಸ್‌ ಫ್ರಮ್‌ ದ ಟೋರ್‌ಮೆಂಟ್‌ ಆಫ್‌ ಅಡೋಲೆಸೆನ್ಸ್‌ ಪುಸ್ತಕದಿಂದ.