ಮಾಹಿತಿ ಇರುವಲ್ಲಿ ಹೋಗಲು

ಅಂಟುರೋಗಗಳಿಗೆ ಕೊನೆ ಇದಿಯಾ?

ಅಂಟುರೋಗಗಳಿಗೆ ಕೊನೆ ಇದಿಯಾ?

ಬೈಬಲ್‌ ಕೊಡೋ ಉತ್ತರ

 ಕಡೇ ದಿನಗಳಲ್ಲಿ ಅಂಟುರೋಗಗಳು ಬರುತ್ತೆ ಅಂತ ಬೈಬಲ್‌ ಮುಂಚೆನೇ ಹೇಳಿತ್ತು. (ಲೂಕ 21:11) ಈ ತರದ ಅಂಟುರೋಗಗಳು ದೇವರು ನಮಗೆ ಕೊಡೋ ಶಿಕ್ಷೆಯಲ್ಲ. ದೇವರು ತನ್ನ ಸರ್ಕಾರದ ಮೂಲಕ ಅಂಟುರೋಗಗಳನ್ನೂ ಸೇರಿಸಿ ಎಲ್ಲಾ ಕಾಯಿಲೆಗಳನ್ನ ತೆಗೆದು ಹಾಕ್ತಾನೆ.

 ಅಂಟುರೋಗಗಳ ಬಗ್ಗೆ ಬೈಬಲ್‌ ಮುಂಚೆನೇ ಹೇಳಿತ್ತಾ?

 ಬೈಬಲ್‌ ನಿರ್ದಿಷ್ಟವಾಗಿ ಇಂಥದ್ದೇ ಅಂಟುರೋಗಗಳು ಅಥ್ವಾ ಕಾಯಿಲೆಗಳು ಬರುತ್ತೆ ಅಂತ ಮುಂತಿಳಿಸಿಲ್ಲ. ಉದಾಹರಣೆಗೆ, ಕೋವಿಡ್‌-19, ಏಡ್ಸ್‌, ಸ್ಲ್ಯಾನಿಷ್‌ ಫ್ಲೂ. ಆದ್ರೆ “ಅಂಟುರೋಗಗಳು” ಮತ್ತು “ಮಾರಕ ವ್ಯಾಧಿ”ಗಳು ಬರುತ್ತೆ ಅಂತ ಮುಂಚೆನೇ ಹೇಳಿದೆ. (ಲೂಕ 21:11; ಪ್ರಕಟನೆ 6:8) “ಕಡೇ ದಿವಸ”ಗಳ ಸೂಚನೆಗಳಲ್ಲಿ ಅಂಟುರೋಗಗಳು ಕೂಡ ಸೇರಿದೆ. ಕಡೇದಿವಸಗಳನ್ನ ಬೈಬಲ್‌ “ವಿಷಯಗಳ ವ್ಯವಸ್ಥೆಯ ಸಮಾಪ್ತಿ” ಅಂತಾನೂ ಹೇಳುತ್ತೆ.—2 ತಿಮೊತಿ 3:1; ಮತ್ತಾಯ 24:3.

 ದೇವರು ಜನರಿಗೆ ಕಾಯಿಲೆ ಬರಿಸಿ ಶಿಕ್ಷೆ ಕೊಡ್ತಾನಾ?

 ದೇವರು ಜನರಿಗೆ ಶಿಕ್ಷೆ ಕೊಡೋದಿಕ್ಕೆ ಕೆಲವು ಸಂದರ್ಭಗಳಲ್ಲಿ ಕಾಯಿಲೆ ಬರೋ ತರ ಮಾಡಿದ. ಉದಾಹರಣೆಗೆ, ಕೆಲವರಿಗೆ ಕುಷ್ಠರೋಗ ಬರೋ ತರ ಮಾಡ್ದ. (ಅರಣ್ಯಕಾಂಡ 12:1-16; 2 ಅರಸು 5:20-27; 2 ಪೂರ್ವಕಾಲವೃತ್ತಾಂತ 26:16-21) ಆದ್ರೆ ಇದ್ರಿಂದ ಮುಗ್ದ ಜನರಿಗೆ ತೊಂದರೆ ಆಗಲಿಲ್ಲ, ಯಾರು ದೇವರ ವಿರುದ್ಧ ದಂಗೆ ಎದ್ರೋ ಅವರಿಗೆ ಮಾತ್ರ ಶಿಕ್ಷಿಸೋಕೆ ಹೀಗೆ ಮಾಡಿದ್ರು.

 ಇವತ್ತಿರೋ ಅಂಟುರೋಗಗಳು ದೇವರು ಕೊಟ್ಟ ಶಿಕ್ಷೆನಾ?

 ಇಲ್ಲ. ದೇವರು ಜನರಿಗೆ ಶಿಕ್ಷೆ ಕೊಡೋದಿಕ್ಕೆ ಅಂಟುರೋಗಗಳನ್ನ, ಕಾಯಿಲೆಗಳನ್ನ ಬರೋ ಹಾಗೆ ಮಾಡ್ತಾರೆ ಅಂತ ಕೆಲವ್ರು ಹೇಳ್ತಾರೆ. ಆದ್ರೆ ಬೈಬಲ್‌ ಹಾಗೆ ಹೇಳಲ್ಲ. ಯಾಕೆ ಗೊತ್ತಾ?

 ಇದಕ್ಕೆ ಒಂದು ಕಾರಣ, ಹಿಂದಿನ ಕಾಲದಲ್ಲಿದ್ದ ಮತ್ತು ಈಗಿರೋ ದೇವರ ಆರಾಧಕರಿಗೆ ಕೂಡ ಕಾಯಿಲೆಗಳು ಬಂದಿದೆ. ಉದಾಹರಣೆಗೆ ದೇವರ ನಂಬಿಗಸ್ತ ಆರಾಧಕನಾಗಿದ್ದ ತಿಮೊತಿ ಆಗಾಗ “ಅಸ್ವಸ್ಥ”ನಾಗ್ತಿದ್ದ. (1 ತಿಮೊತಿ 5:23) ಆದ್ರೆ ದೇವರು ಅವನನ್ನ ಶಿಕ್ಷಿಸೋದಿಕ್ಕೆ ಹೀಗೆ ಮಾಡಿದ್ರು ಅಂತ ಬೈಬಲ್‌ ಹೇಳಲ್ಲ. ಇವತ್ತು ಕೂಡ ದೇವರ ನಂಬಿಗಸ್ತ ಸೇವಕರು ಕಾಯಿಲೆ ಬೀಳ್ತಾರೆ. ನಿಜ ಏನಂದ್ರೆ ಅನೀರೀಕ್ಷಿತ ಘಟನೆಗಳಿಂದ ಕೆಲವರಿಗೆ ಕಾಯಿಲೆಗಳು ಬರುತ್ತೆ.—ಪ್ರಸಂಗಿ 9:11.

 ದೇವರು ಕೆಟ್ಟ ಜನರಿಗೆ ಶಿಕ್ಷೆ ಕೊಡೋ ಸಮಯ ಇನ್ನೂ ಬಂದಿಲ್ಲ ಅಂತ ಬೈಬಲ್‌ ಕಲಿಸುತ್ತೆ. ನಾವೆಲ್ಲ “ರಕ್ಷಣೆಯ ದಿನ”ದಲ್ಲಿ ಜೀವನ ಮಾಡ್ತಾ ಇದ್ದೀವಿ. ಈ ಸಮಯದಲ್ಲಿ ದೇವರು ಎಲ್ಲಾ ಜನರು ತನಗೆ ಹತ್ರ ಆಗಿ ರಕ್ಷಣೆ ಪಡ್ಕೊಬೇಕು ಅಂತ ಆಮಂತ್ರಣ ಕೊಡ್ತಿದ್ದಾನೆ. (2 ಕೊರಿಂಥ 6:2) “ದೇವರ ರಾಜ್ಯದ ಸುವಾರ್ತೆ”ಯನ್ನ ಎಲ್ಲರಿಗೂ ತಿಳಿಸೋದೇ ಆ ಆಮಂತ್ರಣ.—ಮತ್ತಾಯ 24:14.

 ಅಂಟುರೋಗಗಳಿಗೆ ಕೊನೆ ಇದಿಯಾ?

 ಹೌದು, ಮುಂದೆ ಕಾಯಿಲೆಗಳೇ ಇಲ್ಲದಿರೋ ಪರಿಸ್ಥಿತಿ ಬರುತ್ತೆ ಅಂತ ಬೈಬಲ್‌ ಹೇಳುತ್ತೆ. ದೇವರ ಸರ್ಕಾರ ಆಳುವಾಗ ಎಲ್ಲಾ ರೀತಿಯ ಆರೋಗ್ಯದ ಸಮಸ್ಯೆಗಳು ಇಲ್ಲದೆ ಹೋಗುತ್ತೆ. (ಯೆಶಾಯ 33:24; 35:5, 6) ಸಾವು, ನೋವು, ಕಷ್ಟಗಳು ಹೇಳ ಹೆಸರಿಲ್ಲದ ಹಾಗೆ ಆಗುತ್ತೆ. (ಪ್ರಕಟನೆ 21:4) ದೇವ್ರು ಯಾರೆಲ್ಲ ಸತ್ತು ಹೋಗಿದ್ದಾರೋ ಅವರಿಗೆ ಮತ್ತೆ ಜೀವ ಕೊಟ್ಟು ಒಳ್ಳೇ ಆರೋಗ್ಯ ಕೊಡ್ತಾರೆ. ಆಗ ಅವರು ಸಂತೋಷವಾಗಿ ಈ ಭೂಮಿ ಮೇಲಿರಬಹುದು.—ಕೀರ್ತನೆ 37:29; ಅಪೊಸ್ತಲರ ಕಾರ್ಯ 24:15.

 ಕಾಯಿಲೆಗಳ ಬಗ್ಗೆ ಇರೋ ಬೈಬಲ್‌ ವಚನಗಳು

 ಮತ್ತಾಯ 4:23: “ಬಳಿಕ ಅವನು [ಯೇಸು] ಗಲಿಲಾಯದಾದ್ಯಂತ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುತ್ತಾ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರ ಎಲ್ಲ ರೀತಿಯ ರೋಗಗಳನ್ನೂ ದೇಹದೌರ್ಬಲ್ಯಗಳನ್ನೂ ಗುಣಪಡಿಸುತ್ತಾ ಬಂದನು.”

 ಅರ್ಥ: ಯೇಸು ಮಾಡಿದ ಅದ್ಭುತಗಳು ದೇವರ ಸರ್ಕಾರ ಜನರಿಗೆ ಏನೆಲ್ಲ ಮಾಡುತ್ತೆ ಅನ್ನೋದ್ರ ಕಿರುನೋಟವಾಗಿತ್ತು.

 ಲೂಕ 21:11: “ಅಂಟುರೋಗಗಳೂ . . . ಉಂಟಾಗುವವು.”

 ಅರ್ಥ: ಅಂಟುರೋಗಗಳು ಕಡೇ ದಿವಸಗಳ ಸೂಚನೆಗಳಲ್ಲಿ ಒಂದಾಗಿದೆ.

 ಪ್ರಕಟನೆ 6:8: ‘ಇಗೋ, ಒಂದು ನಸುಬಿಳಿಚಾದ ಕುದುರೆಯು ಕಾಣಿಸಿತು; ಅದರ ಮೇಲೆ ಕುಳಿತುಕೊಂಡಿದ್ದವನಿಗೆ ಮೃತ್ಯು ಎಂಬ ಹೆಸರಿತ್ತು. ಹೇಡೀಸ್‌ ಅವನನ್ನು ಬಹಳ ಹತ್ತಿರದಿಂದ ಹಿಂಬಾಲಿಸುತ್ತಾ ಇತ್ತು. ಮಾರಕ ವ್ಯಾಧಿಯಿಂದಲೂ ಕೊಲ್ಲಲು ಅವರಿಗೆ ಅಧಿಕಾರವು ಕೊಡಲ್ಪಟ್ಟಿತು.’

 ಅರ್ಥ: ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಹೇಳಿರೋ ಈ ನಾಲ್ಕು ಕುದುರೆ ಸವಾರರ ಪ್ರವಾದನೆ ನಮ್ಮ ಸಮಯದಲ್ಲಿ ಅಂಟುರೋಗಗಳು ಬರ್ತವೆ ಅನ್ನೋದನ್ನ ಸೂಚಿಸುತ್ತೆ.