ಮಾಹಿತಿ ಇರುವಲ್ಲಿ ಹೋಗಲು

“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?

“ಮೂವರು ಜ್ಞಾನಿಗಳು” ಯಾರು? ಅವರು ಬೆತ್ಲಹೇಮಿನ “ನಕ್ಷತ್ರ”ನ ಹಿಂಬಾಲಿಸಿದ್ರಾ?

ಬೈಬಲ್‌ ಕೊಡೋ ಉತ್ತರ

 ಯೇಸು ಹುಟ್ಟಿದ ನಂತರ ಅವನನ್ನ ನೋಡಲು ಹೋದಂಥ “ಮೂವರು ಜ್ಞಾನಿಗಳು” ಅಥವಾ “ಮೂವರು ರಾಜರ” ಬಗ್ಗೆ ಕ್ರಿಸ್ಮಸ್‌ ಆಚರಣೆಯ ಸಮಯದಲ್ಲಿ ಜನ ಮಾತಾಡ್ತಾರೆ. ಆದರೆ ಬೈಬಲ್‌ ಇವರನ್ನ ಆ ರೀತಿ ಹೇಳಲ್ಲ. (ಮತ್ತಾಯ 2:1) ಬದಲಿಗೆ ಸುವಾರ್ತಾ ಪುಸ್ತಕವನ್ನ ಬರೆದ ಮತ್ತಾಯ, ಈ ವ್ಯಕ್ತಿಗಳ ಬಗ್ಗೆ ತಿಳಿಸುವಾಗ ಮಾಗೋಯ್‌ ಅನ್ನೋ ಪದವನ್ನ ಬಳಸಿದ್ದಾನೆ. ಈ ಪದ ಜೋತಿಷ್ಯ ಮತ್ತು ಮಂತ್ರ ತಂತ್ರಗಳನ್ನ ಮಾಡೋ ನಿಪುಣರನ್ನ ಸೂಚಿಸಿ ಮಾತಾಡುತ್ತೆ. a ಹೆಚ್ಚಿನ ಬೈಬಲ್‌ ಭಾಷಾಂತರಗಳಲ್ಲಿ ಅವರನ್ನ “ಜ್ಯೋತಿಷಿಗಳು” ಅಥವಾ “ಮೇಜೈ” ಅಂತ ಕರೆಯಲಾಗಿದೆ. b

 ಎಷ್ಟು ಮಂದಿ “ಜ್ಞಾನಿಗಳು” ಇದ್ರು?

 ಇದರ ಬಗ್ಗೆ ಬೈಬಲ್‌ ಏನೂ ಹೇಳಲ್ಲ. ಆದರೆ ಒಬ್ಬೊಬ್ಬರು ಒಂದೊಂದು ತರ ಹೇಳ್ತಾರೆ. ಎನ್‌ಸೈಕ್ಲಪೀಡಿಯ ಬ್ರಿಟಾನಿಕ “ಏಷ್ಯಾದ ಜನರು 12 ಜನ ಅಂತ ಹೇಳ್ತಾರೆ, ಆದರೆ ಅಮೇರಿಕ ಮತ್ತು ಯೂರೋಪಿನವರು ಮೂರು ಜನ ಅಂತ ನಂಬ್ತಾರೆ. ಯಾಕಂದ್ರೆ ಬೈಬಲ್‌ನಲ್ಲಿ ಮೂರು ರೀತಿಯ ಉಡುಗೊರೆಗಳಾದ ‘ಚಿನ್ನ ಧೂಪ ಮತ್ತು ರಕ್ತಬೋಳಗಳನ್ನು’ (ಮತ್ತಾಯ 2:11) ಯೇಸುಗೆ ಕೊಡಲು ಅವ್ರು ತಂದ್ರು” ಅಂತ ಹೇಳುತ್ತೆ.

 ಆ “ಜ್ಞಾನಿಗಳು” ರಾಜರಾಗಿದ್ರಾ?

 ಕ್ರಿಸ್ಮಸ್‌ ಬಗ್ಗೆ ಇರೋ ಕಥೆಗಳಲ್ಲಿ ಜನ ಅವರನ್ನ ರಾಜರು ಅಂತ ಹೇಳ್ತಾರೆ, ಆದರೆ ಬೈಬಲ್‌ ಎಲ್ಲೂ ಅವರನ್ನ ರಾಜರು ಅಂತ ಹೇಳಲ್ಲ. ಎನ್‌ಸೈಕ್ಲಪೀಡಿಯ ಬ್ರಿಟಾನಿಕ ಪ್ರಕಾರ ಯೇಸು ಹುಟ್ಟಿ ನೂರಾರು ವರ್ಷಗಳಾದ ಮೇಲೆ ಜನ ಯೇಸುವಿನ ಜನನದ ಬಗ್ಗೆ ಅವರದ್ದೇ ಆದ ಕಲ್ಪನೆಗಳನ್ನ ಮಾಡಿಕೊಂಡ್ರು. ಯೇಸುನ ನೋಡೋಕೆ ಬಂದವ್ರನ್ನ ರಾಜರು ಅಂತ ಹೇಳೋಕೆ ಶುರು ಮಾಡಿದ್ರು.

 ಅವರ ಹೆಸರುಗಳೇನು?

 ಆ ಜ್ಯೋತಿಷಿಗಳ ಹೆಸರುಗಳನ್ನ ಬೈಬಲ್‌ನಲ್ಲಿ ಎಲ್ಲೂ ತಿಳಿಸಿಲ್ಲ. ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ ಪ್ರಕಾರ “ಅವರ ಕಲ್ಪಿತ ಕಥೆಗಳಲ್ಲಿ ಅವರ ಹೆಸರುಗಳು ಹೀಗಿದೆ: ಗಾಸ್‌ಪಾರ್‌, ಮೆಲ್ಕಿಯೊರ್‌ ಮತ್ತು ಬಾಲ್ಟಾಜಾರ್‌.”

 ಅವರು ಯಾವಾಗ ಯೇಸುನ ಭೇಟಿಮಾಡಿದ್ರು?

 ಜ್ಯೋತಿಷಿಗಳು ಯೇಸು ಹುಟ್ಟಿ ಅನೇಕ ತಿಂಗಳುಗಳು ಆದಮೇಲೆ ಅವನನ್ನ ಭೇಟಿ ಮಾಡಿರಬಹುದು. ಈ ರೀತಿ ಯಾಕೆ ಹೇಳಬಹುದು ಅಂದ್ರೆ ರಾಜ ಹೆರೋದ, ಯೇಸುನ ಸಾಯಿಸೋಕ್ಕಾಗಿ ಎರಡು ವರ್ಷ ಅಥವಾ ಅದಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳನ್ನ ಸಾಯಿಸೋಕೆ ಆಜ್ಞೆ ಕೊಟ್ಟ. ಜ್ಯೋತಿಷಿಗಳು ಯೇಸುವಿನ ವಯಸ್ಸಿನ ಬಗ್ಗೆ ಕೊಟ್ಟಂಥ ಮಾಹಿತಿಯ ಆಧಾರದ ಮೇಲೆ ರಾಜ ಈ ಆಜ್ಞೆನ ಕೊಟ್ಟ.—ಮತ್ತಾಯ 2:16.

 ಜ್ಯೋತಿಷಿಗಳು ಯೇಸು ಹುಟ್ಟಿದ ಅದೇ ರಾತ್ರಿ ಆತನನ್ನ ಭೇಟಿ ಮಾಡಲಿಲ್ಲ. ‘ಅವರು ಮನೆಯೊಳಗೆ ಹೋದಾಗ ಚಿಕ್ಕ ಮಗುವನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡರು’ ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 2:11) ಇದರಿಂದ ನಮಗೆ ಏನು ಗೊತ್ತಾಗುತ್ತೆ ಅಂದ್ರೆ ಅವರು ಯೇಸುನ ಭೇಟಿಮಾಡಿದಾಗ ಯೇಸು ಗೊದಲಿಯಲ್ಲಿ ಇರಲಿಲ್ಲ. ಬದಲಾಗಿ ಅವರ ಕುಟುಂಬ ಒಂದು ಮನೆಯಲ್ಲಿ ಇತ್ತು.—ಲೂಕ 2:16.

 ಆ “ಜ್ಞಾನಿಗಳು” ಬೆತ್ಲಹೇಮಿನ ನಕ್ಷತ್ರನ ಹಿಂಬಾಲಿಸುವಂತೆ ದೇವರು ಮಾಡಿದ್ನಾ?

 ಬೆತ್ಲಹೇಮಿನ ಕಡೆ ಜ್ಯೋತಿಷಿಗಳನ್ನ ಮಾರ್ಗದರ್ಶಿಸೋಕೆ ದೇವರೇ ನಕ್ಷತ್ರನ ಕಳಿಸಿದ್ರು ಅಂತ ಕೆಲವರು ನಂಬ್ತಾರೆ. ಆದ್ರೆ ಅದು ನಿಜ ಅಲ್ಲ ಅನ್ನೋಕೆ ಕೆಲವು ಆಧಾರಗಳನ್ನ ನೋಡೋಣ.

  •   ಆ ನಕ್ಷತ್ರ ಜ್ಯೋತಿಷಿಗಳನ್ನ ಮೊದಲು ಯೆರೂಸಲೇಮಿನ ಕಡೆ ನಡೆಸ್ತು. “ಪೂರ್ವ ಭಾಗಗಳಿಂದ ಜ್ಯೋತಿಷಿಗಳು ಯೆರೂಸಲೇಮಿಗೆ ಬಂದು, ‘ಯೆಹೂದ್ಯರ ಅರಸನಾಗಿ ಹುಟ್ಟಿದವನು ಎಲ್ಲಿದ್ದಾನೆ? ನಾವು ಪೂರ್ವಭಾಗದಲ್ಲಿದ್ದಾಗ ಅವನ ನಕ್ಷತ್ರವನ್ನು ಕಂಡೆವು; ನಾವು ಅವನಿಗೆ ಪ್ರಣಾಮಮಾಡಲು ಬಂದಿದ್ದೇವೆ’ ಎಂದರು” ಅಂತ ಬೈಬಲ್‌ ಹೇಳುತ್ತೆ.—ಮತ್ತಾಯ 2:1, 2.

  •   ಬೆತ್ಲಹೇಮಿಗೆ ಮೊದಲು ಹೋಗಲು ಜ್ಯೋತಿಷಿಗಳನ್ನ ಮಾರ್ಗದರ್ಶಿಸಿದ್ದು ನಕ್ಷತ್ರವಲ್ಲ, ರಾಜ ಹೆರೋದ. ತನ್ನ ವಿರೋಧವಾಗಿ ‘ಯೆಹೂದ್ಯರ ಅರಸ’ ಬರ್ತಾನೆ ಅಂತ ಗೊತ್ತಾದಾಗ, ಹೆರೋದ ವಾಗ್ದತ್ತ ಕ್ರಿಸ್ತ ಎಲ್ಲಿ ಹುಟ್ಟುತ್ತಾನೆ ಅಂತ ತನಿಖೆ ಮಾಡ್ದ. (ಮತ್ತಾಯ 2:2-6) ಅದು ಬೆತ್ಲಹೇಮಲ್ಲೇ ಅಂತ ಗೊತ್ತಾದ ಮೇಲೆ ಜ್ಯೋತಿಷಿಗಳನ್ನ ಅಲ್ಲಿಗೆ ಕಳಿಸಿ, ಮಗುವಿನ ಬಗ್ಗೆ ತನ್ನ ಹತ್ರ ವರದಿ ಹೇಳಬೇಕಂತ ಹೇಳಿದ.

     ಹೆರೋದ ಹೇಳಿದ ಮೇಲೆನೇ ಜ್ಯೋತಿಷಿಗಳು ಬೆತ್ಲಹೇಮಿಗೆ ಹೋದರು. “ಅವರು ಅರಸನ ಮಾತನ್ನು ಕೇಳಿಸಿಕೊಂಡು ತಮ್ಮ ದಾರಿಹಿಡಿದು ಹೋದರು; ಆಗ ಇಗೋ, ಅವರು ಪೂರ್ವದಲ್ಲಿದ್ದಾಗ ನೋಡಿದ್ದ ನಕ್ಷತ್ರವು ಅವರ ಮುಂದೆ ಸಾಗುತ್ತಾ ಆ ಚಿಕ್ಕ ಮಗುವಿದ್ದ ಸ್ಥಳದ ಮೇಲೆ ನಿಂತಿತು” ಅಂತ ಬೈಬಲ್‌ ಹೇಳುತ್ತೆ.—ಮತ್ತಾಯ 2:9.

  •   “ನಕ್ಷತ್ರ” ಕಾಣಿಸ್ದಾಗೆಲ್ಲ ಯೇಸುವಿನ ಪ್ರಾಣಕ್ಕೆ ಅಪಾಯ ಬಂತು ಮತ್ತು ಎಷ್ಟೋ ಅಮಾಯಕ ಮಕ್ಕಳ ಕೊಲೆಯಾಯ್ತು. ಬೆತ್ಲಹೇಮಿಂದ ಜ್ಯೋತಿಷಿಗಳು ವಾಪಸಾದಾಗ, ದೇವರು ಅವರನ್ನ ಹೆರೋದನ ಹತ್ರ ಹೋಗಬಾರದು ಅಂತ ಎಚ್ಚರಿಕೆ ಕೊಟ್ಟನು.—ಮತ್ತಾಯ 2:12.

 ಇದಕ್ಕೆ ಹೆರೋದ ಹೇಗೆ ಪ್ರತಿಕ್ರಿಯಿಸಿದ? “ಜ್ಯೋತಿಷಿಗಳು ತನಗೆ ಮೋಸಮಾಡಿದರೆಂದು ಹೆರೋದನು ತಿಳಿದು ತುಂಬ ರೋಷಗೊಂಡು, ಜ್ಯೋತಿಷಿಗಳಿಂದ ಜಾಗರೂಕತೆಯಿಂದ ವಿಚಾರಿಸಿ ತಿಳಿದುಕೊಂಡಿದ್ದ ಕಾಲಕ್ಕನುಸಾರ, ಬೇತ್ಲೆಹೇಮ್‌ ಮತ್ತು ಅದರ ಎಲ್ಲ ಕ್ಷೇತ್ರಗಳಿಗೆ ತನ್ನ ಆಳುಗಳನ್ನು ಕಳುಹಿಸಿ ಅಲ್ಲಿದ್ದ ಎರಡು ವರ್ಷದ ಹಾಗೂ ಅದಕ್ಕಿಂತ ಕಡಮೆ ಪ್ರಾಯದ ಎಲ್ಲ ಗಂಡುಮಕ್ಕಳನ್ನು ಕೊಲ್ಲಿಸಿದನು” ಅಂತ ಬೈಬಲ್‌ ಹೇಳುತ್ತೆ. (ಮತ್ತಾಯ 2:16) ಈ ರೀತಿ ಕೆಟ್ಟದ್ದನ್ನ ದೇವರು ಯಾವತ್ತೂ ಮಾಡಲ್ಲ.—ಯೋಬ 34:10.

a ಕ್ರಿ.ಪೂ. ಐದನೇ ಶತಮಾನದಲ್ಲಿದ್ದ ಗ್ರೀಕ್‌ ಇತಿಹಾಸಕಾರ ಹೆರಾಡಟಸ್‌, ಅವನ ಕಾಲದಲ್ಲಿ ಇದ್ದಂತಹ ಮಾಗೋಯ್‌ ಮೇದ್ಯ (ಪರ್ಶಿಯನ್‌) ಜನಾಂಗಕ್ಕೆ ಸೇರಿದವರಾಗಿದ್ದು, ಜ್ಯೋತಿಷ್ಯ ಮತ್ತು ಕನಸುಗಳ ಅರ್ಥವನ್ನ ವಿವರಿಸೋದರಲ್ಲಿ ನಿಪುಣರಾಗಿದ್ರು ಅಂತ ಹೇಳಿದ್ದಾನೆ.

b ನ್ಯೂ ಅಮೆರಿಕನ್‌ ಸ್ಟ್ಯಾಂಡರ್ಡ್‌ ಬೈಬಲ್‌, ದ ನ್ಯೂ ಅಮೆರಿಕನ್‌ ಬೈಬಲ್‌, ದ ನ್ಯೂ ಇಂಗ್ಲೀಷ್‌ ಬೈಬಲ್‌, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌ ಸ್ಟಡಿ ಬೈಬಲ್‌ಗಳನ್ನ ನೋಡಿ. ಕಿಂಗ್‌ ಜೇಮ್ಸ್‌ ವರ್ಷನ್‌ ಇವರನ್ನ “ಜ್ಞಾನಿಗಳು” ಅಂತ ಹೇಳುತ್ತೇ ಆದ್ರೆ ಅವರು ಮೂರು ಜನ ಅಂತ ಹೇಳಲ್ಲ.