ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆಗಳು

ಮೌಖಿಕ ಸೆಕ್ಸ್‌ (ಓರಲ್ಸೆಕ್ಸ್‌) ಕೂಡ ಒಂದು ಲೈಂಗಿಕ ಕ್ರಿಯೆನಾ?

ಮೌಖಿಕ ಸೆಕ್ಸ್‌ (ಓರಲ್ಸೆಕ್ಸ್‌) ಕೂಡ ಒಂದು ಲೈಂಗಿಕ ಕ್ರಿಯೆನಾ?

 ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ, (ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಷನ್‌) 15 ರಿಂದ 19 ವಯಸ್ಸಿನ ಯುವ ಜನರ ಜೊತೆ ಇಂಟರ್‌ವ್ಯೂ ನಡೆಸ್ತು. ಇವರಲ್ಲಿ ಹೆಚ್ಚಿನವರು ಮೌಖಿಕ ಸೆಕ್ಸ್‌ ಮಾಡಿದ್ರು. ಓರಲ್‌ ಸೆಕ್ಸ್‌ ಈಸ್‌ ದಾ ನ್ಯೂ ಗುಡ್‌ನೈಟ್‌ ಕಿಸ್‌ ಅನ್ನೋ ಪುಸ್ತಕ ಬರೆದಿರೋ ಶಾರ್ಲೀನ್‌ ಅಜಮ್‌ ಹೀಗಂತಾರೆ, “ಯುವ ಪ್ರಾಯದ ಹುಡುಗ ಹುಡುಗಿಯರ ಹತ್ತಿರ ಮೌಖಿಕ ಸೆಕ್ಸ್‌ ಬಗ್ಗೆ ನೀವು ಮಾತಾಡಿದ್ರೆ ಅದೇನು ದೊಡ್ಡ ವಿಷಯ ಅಲ್ಲ ಅಂತ ಅವರು ಹೇಳ್ತಾರೆ. ಅವರ ಪ್ರಕಾರ ಇದು ಸೆಕ್ಸ್‌ ಅಲ್ಲ.”

 ನಿಮಗೇನು ಅನಿಸುತ್ತೆ?

 ಈ ಕೆಳಗಿನ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಅಂತ ಉತ್ತರಿಸಿ.

  1.   ಮೌಖಿಕ ಸೆಕ್ಸ್‌ ಮಾಡಿದ್ರಿಂದ ಒಬ್ಬ ಹುಡುಗಿ ಗರ್ಭಿಣಿ ಆಗ್ತಾಳಾ?

    1.   ಹೌದು

    2.   ಇಲ್ಲ

  2.   ಮೌಖಿಕ ಸೆಕ್ಸ್‌ನಿಂದ ಯಾವುದಾದ್ರೂ ಕಾಯಿಲೆ ಬರುತ್ತಾ?

    1.   ಹೌದು

    2.   ಇಲ್ಲ

  3.   ಮೌಖಿಕ ಸೆಕ್ಸ್‌ ನಿಜವಾಗಲೂ ಒಂದು ಲೈಂಗಿಕ ಕ್ರಿಯೆನಾ?

    1.   ಹೌದು

    2.   ಇಲ್ಲ

 ಇದರ ಬಗ್ಗೆ ನಿಜ ಏನು?

 ನೀವು ಕೊಟ್ಟಿರೋ ಉತ್ತರವನ್ನ ಈ ಕೆಳಗಿನ ಮಾಹಿತಿ ಜೊತೆ ಹೊಂದಿಸಿ.

  1.   ಮೌಖಿಕ ಸೆಕ್ಸ್‌ ಮಾಡಿದ್ರಿಂದ ಒಬ್ಬ ಹುಡುಗಿ ಗರ್ಭಿಣಿ ಆಗ್ತಾಳಾ?

     ಉತ್ತರ: ಇಲ್ಲ. ಹಾಗಾಗಿ ಅನೇಕ ಜನರು ಇದ್ರಿಂದ ಏನೂ ಹಾನಿ ಆಗಲ್ಲ ಅಂತ ನೆನಸುತ್ತಾರೆ.

  2.   ಮೌಖಿಕ ಸೆಕ್ಸ್‌ನಿಂದ ಯಾವುದಾದ್ರೂ ಕಾಯಿಲೆ ಬರುತ್ತಾ?

     ಉತ್ತರ: ಹೌದು. ಮೌಖಿಕ ಸೆಕ್ಸ್‌ ಮಾಡುವವರಿಗೆ ಹೆಪಟೈಟಿಸ್‌ (ಎ ಅಥವಾ ಬಿ), ಜನನಾಂಗದ ನರವಲಿಗಳು (genital warts), ಗೊನೊರಿಯಾ, ಹರ್ಪಿಸ್‌, ಎಚ್‌ಐವಿ ಮತ್ತು ಸಿಫಿಲಿಸ್‌ ಅಂತಹ ರೋಗಗಳು ಬರೋ ಸಾಧ್ಯತೆ ಇದೆ.

  3.   ಮೌಖಿಕ ಸೆಕ್ಸ್‌ ನಿಜವಾಗಲೂ ಒಂದು ಲೈಂಗಿಕ ಕ್ರಿಯೆನಾ?

     ಉತ್ತರ: ಹೌದು. ಇನ್ನೊಬ್ಬ ವ್ಯಕ್ತಿಯ ಜನನಾಂಗಗಳು ಒಳಗೊಂಡಿರುವ ಯಾವುದೇ ಕ್ರಿಯೆಯನ್ನು ಸೆಕ್ಸ್‌ ಅಂತ ಪರಿಗಣಿಸಲಾಗುತ್ತೆ. ಇದರಲ್ಲಿ ಕೇವಲ ಲೈಂಗಿಕ ಸಂಬಂಧ ಇಟ್ಟುಕೊಳ್ಳೋದು ಮಾತ್ರ ಅಲ್ಲ ಮೌಖಿಕ ಸೆಕ್ಸ್‌, ಗುದ ಸೆಕ್ಸ್‌ (anal sex), ಮತ್ತು ಹಸ್ತಮೈಥುನ ಕೂಡ ಸೇರಿದೆ.

 ಇದು ಯಾಕೆ ಮುಖ್ಯ?

 ಮೌಖಿಕ ಸೆಕ್ಸ್‌ಗೆ ಸಂಬಂಧ ಪಡುವ ಯಾವ ತತ್ವಗಳು ಬೈಬಲ್‌ನಲ್ಲಿದೆ ಅಂತ ನೋಡೋಣ.

 ಬೈಬಲ್‌ನಲ್ಲಿ ಹೀಗಿದೆ: “ನೀವು ಲೈಂಗಿಕ ಅನೈತಿಕತೆಯಿಂದ ದೂರ ಇರಬೇಕು ಅನ್ನೋದೇ ದೇವರ ಇಷ್ಟ.”—1 ಥೆಸಲೊನೀಕ 4:3.

 ಬೈಬಲ್‌ನಲ್ಲಿ ಬಳಸಲಾಗಿರೋ “ಲೈಂಗಿಕ ಅನೈತಿಕತೆ” ಅನ್ನೋ ಪದದ ಮೂಲ ಅರ್ಥ, ಮದುವೆ ಮುಂಚೆ ನಡೆಸೋ ಎಲ್ಲಾ ರೀತಿಯ ಲೈಂಗಿಕ ಕ್ರಿಯೆಗಳು ಮತ್ತು ಮದುವೆ ನಂತರ ತನ್ನ ಸಂಗಾತಿಯನ್ನ ಬಿಟ್ಟು ಬೇರೆಯವರ ಜೊತೆ ನಡಿಸುವ ಲೈಂಗಿಕ ಕ್ರಿಯೆಗಳು ಸೇರಿವೆ. ಅಂದ್ರೆ, ಶಾರೀರಿಕ ಸಂಬಂಧವನ್ನ ಇಟ್ಟುಕೊಳ್ಳೋದು, ಮೌಖಿಕ ಸೆಕ್ಸ್‌, ಗುದ ಸೆಕ್ಸ್‌ ಮತ್ತು ಬೇರೆ ವ್ಯಕ್ತಿಯ ಹಸ್ತಮೈಥುನ ಮಾಡೋದು. ಅನೈತಿಕ ಸಂಬಂಧವನ್ನ ಇಟ್ಟುಕೊಳ್ಳುವ ವ್ಯಕ್ತಿ ಕೆಟ್ಟ ಪರಿಣಾಮಗಳನ್ನ ಎದುರಿಸಬೇಕಾಗುತ್ತೆ. ಅದರಲ್ಲೂ ದೇವರ ಜೊತೆಗಿರುವ ಒಳ್ಳೇ ಸ್ನೇಹವನ್ನ ಅವನು ಕಳಕೊಳ್ಳಬೇಕಾಗುತ್ತೆ.—1 ಪೇತ್ರ 3:12.

 ಬೈಬಲ್‌ನಲ್ಲಿ ಹೀಗಿದೆ: “ಲೈಂಗಿಕ ಅನೈತಿಕತೆ ಮಾಡುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪ ಮಾಡ್ತಾನೆ.”—1 ಕೊರಿಂಥ 6:18.

 ಮೌಖಿಕ ಸೆಕ್ಸ್‌ ಮಾಡೋದ್ರಿಂದ ಆರೋಗ್ಯ ಹಾಳಾಗುತ್ತೆ. ಅದೂ ಅಲ್ಲದೆ, ದೇವರ ಜೊತೆಗಿರೋ ಸ್ನೇಹ ಮುರಿಯುತ್ತೆ. ಇದ್ರಿಂದ ಒಬ್ಬ ವ್ಯಕ್ತಿ ಕುಗ್ಗಿ ಹೋಗಬಹುದು. ಸೆಕ್ಸ್‌ ಬಗ್ಗೆ ನಿಮ್ಮ ಮಕ್ಕಳ ಹತ್ತಿರ ಮಾತಾಡೋದು ಅನ್ನೋ ಇಂಗ್ಲಿಷ್‌ ಪುಸ್ತಕದಲ್ಲಿ ಏನಿದೆ ಅಂದ್ರೆ, “ಒಬ್ಬ ವ್ಯಕ್ತಿ ಲೈಂಗಿಕ ಸಂಬಂಧ ಇಟ್ಟುಕೊಂಡಾಗ ಅವನ ಮನಸ್ಸು ತುಂಬಾ ಚುಚ್ಚುತ್ತೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಅನಿಸುತ್ತೆ. ತುಂಬಾ ಪಶ್ಚಾತ್ತಾಪ ಪಡ್ತಾನೆ, ತುಂಬಾ ದುಃಖನೂ ಆಗುತ್ತೆ. ಲೈಂಗಿಕ ಅನೈತಿಕತೆ ಮಾಡಿದಾಗ ಬರುವಂಥ ಈ ಎಲ್ಲ ಭಾವನೆಗಳು ಮೌಖಿಕ ಸೆಕ್ಸ್‌ ಮಾಡಿದಾಗ ಅಥವಾ ಅಂತ ಬೇರೆ ಕೆಲಸಗಳನ್ನ ಮಾಡಿದಾಗಲೂ ಬರುತ್ತೆ. ಯಾಕೆಂದ್ರೆ ಇವು ಎಲ್ಲನೂ ಲೈಂಗಿಕ ಕ್ರಿಯೆಗಳೇ.”

 ಬೈಬಲ್‌ನಲ್ಲಿ ಹೇಗಿದೆ: “ಯೆಹೋವನಾದ ನಾನೇ ನಿನ್ನ ದೇವರು. ನಿನ್ನ ಒಳಿತಿಗಾಗಿ ನಿನಗೆ ಬೋಧಿಸುವವನು ನಾನೇ.”—ಯೆಶಾಯ 48:17.

 ಸೆಕ್ಸ್‌ ಬಗ್ಗೆ ದೇವರು ಕೊಟ್ಟಿರೋ ನಿಯಮಗಳನ್ನ ತಿಳ್ಕೊಂಡಾಗ ನಿಮಗೆ ಪ್ರಯೋಜನ ಆಗಿದೆಯಾ? ಅಥವಾ ಇದನ್ನ ಪಾಲಿಸುವುದು ಕಷ್ಟ ಅಂತ ನಿಮಗೆ ಅನಿಸುತ್ತಾ? ಈ ಪ್ರಶ್ನೆಗೆ ಉತ್ತರ ಪಡಿಯೋ ಮುಂಚೆ ಒಂದು ಉದಾಹರಣೆ ನೋಡಿ. ಒಂದು ಹೈವೇನಲ್ಲಿ ತುಂಬಾ ಗಾಡಿ ಓಡಾಡುತ್ತಾ ಇದೆ. ಆ ಹೈವೇನಲ್ಲಿ ಸ್ಪೀಡ್‌ ಲಿಮಿಟ್‌ ಬಗ್ಗೆ, ಟ್ರಾಫಿಕ್‌ ಸಿಗ್ನಲ್‌ಗಳ ಬಗ್ಗೆ ತುಂಬಾ ಚಿಹ್ನೆಗಳಿವೆ. ನಿಮಗೇನು ಅನಿಸುತ್ತೆ, ಈ ಚಿಹ್ನೆಗಳನ್ನ ಪಾಲಿಸುವುದು ನಿಮಗೆ ತುಂಬಾ ಕಷ್ಟ ಅಂತ ಅನಿಸುತ್ತಾ? ಅಥವಾ ಇವನ್ನ ಪಾಲಿಸಿದರೆ ನಿಮ್ಮ ಜೀವ ಉಳಿಯುತ್ತಾ? ನೀವು ಮತ್ತು ಗಾಡಿ ಓಡಿಸೋ ಬೇರೆಯವರು ಈ ಚಿಹ್ನೆಗಳಿಗೆ ಗಮನ ಕೊಡಲಿಲ್ಲ ಅಂದ್ರೆ ಏನಾಗಬಹುದು?

ಟ್ರಾಫಿಕ್‌ ನಿಯಮಗಳನ್ನ ಪಾಲಿಸುವುದು ಕೆಲವು ಸಲ ಕಷ್ಟ ಅಂತ ಅನಿಸಬಹುದು. ಆದರೆ ಅದನ್ನ ಪಾಲಿಸಿದಾಗ ನಮ್ಮ ಜೀವ ಉಳಿಯುತ್ತೆ. ಅದೇ ತರ ದೇವರು ಕೊಟ್ಟ ನಿಯಮಗಳನ್ನ ಪಾಲಿಸೋಕೆ ಕಷ್ಟ ಅನಿಸಬಹುದು ಆದರೆ ಅದರಿಂದ ನಮಗೆ ಪ್ರಯೋಜನವಿದೆ.

 ದೇವರು ಕೊಟ್ಟಿರೋ ನಿಯಮಗಳನ್ನು ಪಾಲಿಸೋದರ ವಿಷಯದಲ್ಲೂ ಇದು ನಿಜಾನೇ. ಒಂದುವೇಳೆ ಆ ನಿಯಮಗಳಿಗೆ ನೀವು ಗಮನ ಕೊಡಲಿಲ್ಲ ಅಂದ್ರೆ ಏನನ್ನ ಬಿತ್ತುತ್ತಿರೋ ಅದನ್ನೇ ಕೊಯುತ್ತೀರ. (ಗಲಾತ್ಯ 6:7) ಸೆಕ್ಸ್‌ ಸ್ಮಾರ್ಟ್‌ ಅನ್ನೋ ಹೆಸರಿನ ಪುಸ್ತಕ ಹೀಗೆ ಹೇಳುತ್ತೆ, “ನಿಮ್ಮ ನಂಬಿಕೆಯನ್ನ ಮತ್ತು ನೈತಿಕ ಮಟ್ಟಗಳನ್ನ ಕಡೆಗಣಿಸಿ ತಪ್ಪು ಅಂತ ಗೊತ್ತಿರೋ ಕೆಲಸಗಳನ್ನೇ ಮಾಡ್ತಾ ಇದ್ರೆ ನಿಮ್ಮ ಬಗ್ಗೆ ನಿಮಗೇ ಗೌರವ ಇರಲ್ಲ.” ಇದರ ಬದಲು ದೇವರು ಕೊಟ್ಟಿರೋ ತತ್ವಗಳನ್ನ, ನಿಯಮಗಳನ್ನ ಪಾಲಿಸಿದರೆ ನಿಮ್ಮ ನಡತೆಯೂ ಚೆನ್ನಾಗಿರುತ್ತೆ ಜೊತೆಗೆ ಶುದ್ಧ ಮನಸ್ಸಾಕ್ಷಿಯೂ ಇರುತ್ತೆ.—1 ಪೇತ್ರ 3:16.