ಮಾಹಿತಿ ಇರುವಲ್ಲಿ ಹೋಗಲು

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

ಸಾಮಾನ್ಯ ತಪ್ಪುಕಲ್ಪನೆ

 ತಪ್ಪಭಿಪ್ರಾಯ: ಯೆಹೋವನ ಸಾಕ್ಷಿಗಳು ಔಷಧ ಇಲ್ಲವೆ ವೈದ್ಯಕೀಯ ಚಿಕಿತ್ಸೆಯಲ್ಲಿ ನಂಬಿಕೆಯಿಡುವುದಿಲ್ಲ.

 ವಾಸ್ತವಾಂಶ: ನಮಗೂ ನಮ್ಮ ಕುಟುಂಬಕ್ಕೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ನಾವು ಬಯಸುತ್ತೇವೆ. ನಮಗೆ ಆರೋಗ್ಯ ಸಮಸ್ಯೆಯಿರುವಾಗ ರಕ್ತರಹಿತ ಶಸ್ತ್ರಚಿಕಿತ್ಸೆ ನೀಡಬಲ್ಲ ಪರಿಣಿತ ವೈದ್ಯರ ಮರೆಹೋಗುತ್ತೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ಸಹ ನಾವು ಗಣ್ಯಮಾಡುತ್ತೇವೆ. ಯೆಹೋವನ ಸಾಕ್ಷಿಗಳಲ್ಲಿ ಅಸ್ವಸ್ಥರಾದವರ ಚಿಕಿತ್ಸೆಗೆಂದು ಕಂಡುಹಿಡಿದಿರುವ ರಕ್ತರಹಿತ ಚಿಕಿತ್ಸಾ ವಿಧಾನಗಳನ್ನು ಇಂದು ಇತರರ ಪ್ರಯೋಜನಕ್ಕಾಗಿಯೂ ಬಳಸಲಾಗುತ್ತಿದೆ. ಹಲವಾರು ದೇಶಗಳಲ್ಲಿ ಇಂದು ಯಾರು ಬೇಕಾದರೂ ರಕ್ತರಹಿತ ಚಿಕಿತ್ಸೆಯನ್ನು ಆರಿಸಿಕೊಳ್ಳುವ ಮೂಲಕ ರಕ್ತ ಸಂಬಂಧಿ ರೋಗ, ಇಮ್ಯೂನ್‌-ಸಿಸ್ಟಮ್‌ ರಿಯಾಕ್ಷನ್‌ ಮತ್ತು ಹ್ಯೂಮನ್‌ ಎರರ್ಸ್‌ನಿಂದ ತಪ್ಪಿಸಿಕೊಳ್ಳಲು ಸಾಧ್ಯವಿದೆ.

 ತಪ್ಪಭಿಪ್ರಾಯ: ದೇವರಲ್ಲಿ ನಂಬಿಕೆಯಿಟ್ಟು ಬೇಡಿದರೆ ರೋಗ ವಾಸಿಯಾಗುತ್ತದೆ ಎಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ.

 ವಾಸ್ತವಾಂಶ: ಅದ್ಭುತಮಾಡಿ ಅಥವಾ ಚಮತ್ಕಾರದಿಂದರೋಗ ವಾಸಿಯಾಗುತ್ತದೆ ಎಂದು ನಾವು ನಂಬುವುದಿಲ್ಲ.

 ತಪ್ಪಭಿಪ್ರಾಯ: ರಕ್ತರಹಿತ ಚಿಕಿತ್ಸೆ ಬಹಳ ದುಬಾರಿ.

 ವಾಸ್ತವಾಂಶ: ರಕ್ತರಹಿತ ವೈದ್ಯಕೀಯ ಚಿಕಿತ್ಸೆ ಅಂದುಕೊಂಡಷ್ಟೇನು ದುಬಾರಿಯಲ್ಲ. a

 ತಪ್ಪಭಿಪ್ರಾಯ: ಪ್ರತಿ ವರ್ಷ ಹಲವಾರು ಸಾಕ್ಷಿಗಳು ಮತ್ತು ನೂರಾರು ಮಕ್ಕಳು ರಕ್ತರಹಿತ ಚಿಕಿತ್ಸೆಯಿಂದಾಗಿ ಸಾವಿಗೀಡಾಗುತ್ತಿದ್ದಾರೆ.

 ವಾಸ್ತವಾಂಶ: ಇದು ನಿರಾಧಾರವಾದ ಹೇಳಿಕೆ. ಶಸ್ತ್ರಚಿಕಿತ್ಸಕರು ಪ್ರತಿನಿತ್ಯ ಎಷ್ಟೋ ದೊಡ್ಡ ದೊಡ್ಡ ಶಸ್ತ್ರಚಿಕಿತ್ಸೆಯನ್ನು ರಕ್ತ ಉಪಯೋಗಿಸದೇ ಮಾಡುತ್ತಾರೆ. ಉದಾ:ಹೃದಯ ಮತ್ತು ಮೂಳೆಯ ಶಸ್ತ್ರಚಿಕಿತ್ಸೆ ಮಾಡುತ್ತಾರೆ. b ಅಷ್ಟೇ ಅಲ್ಲ, ರಕ್ತ ಉಪಯೋಗಿಸದೆ ಅಂಗಾಂಗಗಳ ಟಾನ್ಸ್‌ಪ್ಲಾಂಟ್‌ ಅಥವಾ ಕಸಿಯನ್ನು ಸಹ ಮಾಡುತ್ತಾರೆ. ರಕ್ತ ತೆಗೆದುಕೊಳ್ಳುವವರಿಗಿಂತ ರಕ್ತ ತೆಗೆದುಕೊಳ್ಳದ ರೋಗಿಗಳೇ (ಮಕ್ಕಳನ್ನೂ ಸೇರಿಸಿ) ಬೇಗ ವಾಸಿಯಾಗುತ್ತಾರೆ. c ಒಂದು ವಿಷಯವಂತೂ ಸತ್ಯ, ರೋಗಿಯೊಬ್ಬ ರಕ್ತ ತೆಗೆದುಕೊಂಡರೆ ಬದುಕುತ್ತಾನೆ, ತೆಗೆದುಕೊಳ್ಳದಿದ್ದರೆ ಸಾಯುತ್ತಾನೆ ಎಂದು ಖಡಾಖಂಡಿತವಾಗಿ ಯಾರೂ ಹೇಳಸಾಧ್ಯವಿಲ್ಲ.

ಯೆಹೋವನ ಸಾಕ್ಷಿಗಳು ಏಕೆ ರಕ್ತ ತೆಗೆದುಕೊಳ್ಳುವುದಿಲ್ಲ?

 ಇದು ವೈದ್ಯಕೀಯಕ್ಕಲ್ಲ ಬದಲಿಗೆ ಧರ್ಮಕ್ಕೆ ಸಂಬಂಧ ಪಟ್ಟ ವಿಷಯ. ಹಳೇ ಮತ್ತು ಹೊಸ ಒಡಂಬಡಿಕೆಗಳೆರಡೂ ರಕ್ತವನ್ನು ನಿರಾಕರಿಸುವಂತೆ ನೇರ ಆಜ್ಞೆಯನ್ನು ಕೊಡುತ್ತದೆ. (ಆದಿಕಾಂಡ 9:4; ಯಾಜಕಕಾಂಡ 17:10; ಧರ್ಮೋಪದೇಶಕಾಂಡ 12:23; ಅಪೊಸ್ತಲರ ಕಾರ್ಯಗಳು 15:​28, 29) ಅಷ್ಟೇ ಅಲ್ಲ, ದೇವರ ದೃಷ್ಟಿಯಲ್ಲಿ ರಕ್ತವು ಜೀವವಾಗಿದೆ. (ಯಾಜಕಕಾಂಡ 17:14) ಹಾಗಾಗಿ, ದೇವರ ಮಾತಿಗೆ ವಿಧೇಯತೆಯಲ್ಲಿ ಮತ್ತು ಜೀವದಾತನಿಗೆ ಗೌರವ ತೋರಿಸುವ ಸಲುವಾಗಿ ನಾವು ರಕ್ತ ತೆಗೆದುಕೊಳ್ಳುವುದಿಲ್ಲ.

ದಲಾಗುತ್ತಿರುವ ದೃಷ್ಟಿಕೋನ

ರಕ್ತ ನೀಡದೇ ಜಠಿಲವಾದ ಶಸ್ತ್ರಚಿಕಿತ್ಸೆಗಳನ್ನು ಸಹ ಯಶಸ್ವಿಯಾಗಿ ಮಾಡಬಹುದು

 ಒಂದು ಸಮಯದಲ್ಲಿ ರಕ್ತ ತೆಗೆದುಕೊಳ್ಳದಿರುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಮಾನ ಎಂದು ವೀಕ್ಷಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದೃಷ್ಟಿಕೋನ ಬದಲಾಗಿದೆ. ಉದಾಹರಣಗೆ, 2004ರಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ಒಂದು ಪತ್ರಿಕೆಯಲ್ಲಿ ಹೀಗೆ ಹೇಳಲಾಗಿತ್ತು: “ಯೆಹೋವನ ಸಾಕ್ಷಿಗಳ ಚಿಕಿತ್ಸೆಗೆಂದು ಕಂಡುಹಿಡಿದ ಹಲವಾರು ವೈದ್ಯಕೀಯ ವಿಧಾನಗಳನ್ನು ಮುಂಬರುವ ವರ್ಷಗಳಲ್ಲಿ ಎಲ್ಲಾ ರೋಗಿಗಳ ಚಿಕಿತ್ಸೆಗೂ ಉಪಯೋಗಿಸಲಾಗುವುದು.” d 2010ರಲ್ಲಿ ಹಾರ್ಟ್‌, ಲಂಗ್‌ ಆ್ಯಂಡ್‌ ಸರ್ಕ್ಯುಲೇಷನ್‌ ಪತ್ರಿಕೆಯ ಲೇಖನವೊಂದು ಹೀಗೆ ತಿಳಿಸಿತ್ತು: “ರಕ್ತರಹಿತ ಶಸ್ತ್ರಚಿಕಿತ್ಸೆ ಬರೀ ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ ಪ್ರತಿಯೊಂದು ಶಸ್ತ್ರಚಿಕಿತ್ಸೆಯಲ್ಲೂ ಇದೇ ವಿಧಾನವನ್ನು ಬಳಸಬೇಕು.”

 ರಕ್ತ ಉಳಿತಾಯ ವಿಧಾನಗಳನ್ನು ಉಪಯೋಗಿಸಿ ಈಗ ಲೋಕಾದ್ಯಂಥ ಸಾವಿರಾರು ವೈದ್ಯರು ರಕ್ತರಹಿತವಾಗಿ ಜಟಿಲವಾದ ಶಸ್ತ್ರಚಿಕಿತ್ಸೆಗಳನ್ನು ಸಹ ಮಾಡುತ್ತಿದ್ದಾರೆ. ಇಂಥ ಬದಲಿ ವಿಧಾನಗಳನ್ನು ಪ್ರಗತಿಪರ ದೇಶಗಳಲ್ಲೂ ಉಪಯೋಗಿಸಲಾಗುತ್ತಿದೆ. ಯೆಹೋವನ ಸಾಕ್ಷಿಗಳಲ್ಲದ ಅನೇಕ ರೋಗಿಗಳೂ ಇಂಥ ವಿಧಾನವನ್ನು ಉಪಯೋಗಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.

a ಟ್ರ್ಯಾನ್ಸ್‌ಫ್ಯೂಷನ್‌ ಆ್ಯಂಡ್‌ ಅಫೆರಿಸಿಸ್‌ ಸೈಅನ್ಸ್‌, ಸಂಪುಟ 33, ನಂ. 3, ಪು. 349 ನೋಡಿ.

b ದಿ ಜರ್ನಲ್‌ ಆಫ್‌ ಥೊರಾಸಿಕ್‌ ಆ್ಯಂಡ್‌ ಕಾರ್ಡಿಯೋವ್ಯಾಸ್ಕ್ಯೂಲರ್‌ ಸರ್ಜರಿ, ಸಂಪುಟ 134, ನಂ. 2, ಪು 287-288; ಟೆಕ್ಸಾಸ್‌ ಹಾರ್ಟ್‌ ಇನ್ಸ್‌ಟಿಟ್ಯೂಟ್‌ ಜರ್ನಲ್‌, ಸಂಪುಟ 38, ನಂ. 5, ಪು. 563; ಬೆಸಿಕ್ಸ್‌ ಆಫ್‌ ಬ್ಲಡ್‌ ಮ್ಯಾನೇಜ್‌ಮೆಂಟ್‌, ಪು. 2; ಮತ್ತು ಕನ್ಟಿನ್ಯುಯಿಂಗ್‌ ಎಜುಕೇಷನ್‌ ಇನ್‌ ಆ್ಯನಸ್ತೀಸ್ಯ, ಕ್ರಿಟಿಕಲ್‌ ಕೇರ್‌ ಆ್ಯಂಡ್‌ ಪೇನ್‌, ಸಂಪುಟ 4, ನಂ. 2, ಪು. 39 ನೋಡಿ.

c ದಿ ಜರ್ನಲ್‌ ಆಫ್‌ ಥೊರಾಸಿಕ್‌ ಆ್ಯಂಡ್‌ ಕಾರ್ಡಿಯೋವ್ಯಾಸ್ಕ್ಯೂಲರ್‌ ಸರ್ಜರಿ, ಸಂಪುಟ 89, ನಂ. 6, ಪು. 918; ಮತ್ತು ಹಾರ್ಟ್‌, ಲಂಗ್‌ ಆ್ಯಂಡ್‌ ಸರ್ಕ್ಯುಲೇಷನ್‌, ಸಂಪುಟ 19, ಪು. 658 ನೋಡಿ.

d ಕನ್ಟಿನ್ಯುಯಿಂಗ್‌ ಎಜುಕೇಷನ್‌ ಇನ್‌ ಆ್ಯನಸ್ತೀಸ್ಯ, ಕ್ರಿಟಿಕಲ್‌ ಕೇರ್‌ ಆ್ಯಂಡ್‌ ಪೇನ್‌, ಸಂಪುಟ 4, ನಂ. 2, ಪು. 39.