ಮಾಹಿತಿ ಇರುವಲ್ಲಿ ಹೋಗಲು

ದೇವರು ಭೂಮಿಯನ್ನು ದಿನಕ್ಕೆ 24 ತಾಸುಗಳಂತೆ ಆರು ದಿನಗಳಲ್ಲಿ ಸೃಷ್ಟಿಸಿದನೆಂಬ ಸೃಷ್ಟಿವಾದವನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರಾ?

ದೇವರು ಭೂಮಿಯನ್ನು ದಿನಕ್ಕೆ 24 ತಾಸುಗಳಂತೆ ಆರು ದಿನಗಳಲ್ಲಿ ಸೃಷ್ಟಿಸಿದನೆಂಬ ಸೃಷ್ಟಿವಾದವನ್ನು ಯೆಹೋವನ ಸಾಕ್ಷಿಗಳು ನಂಬುತ್ತಾರಾ?

 ಯೆಹೋವನ ಸಾಕ್ಷಿಗಳು ಎಲ್ಲವನ್ನೂ ದೇವರೇ ಸೃಷ್ಟಿ ಮಾಡಿದ್ದಾನೆಂದು ನಂಬುತ್ತಾರೆ. ಆದರೆ, ಆತನು ಅದನ್ನು 24 ತಾಸುಗಳ ಆರು ದಿನಗಳಲ್ಲಿ ಮಾಡಿದನೆಂಬ ಸೃಷ್ಟಿವಾದವನ್ನು ನಂಬುವುದಿಲ್ಲ. ಏಕೆ? ಏಕೆಂದರೆ ಸೃಷ್ಟಿವಾದಿಗಳ ಈ ಆಲೋಚನೆಗಳು ಬೈಬಲಿಗೆ ವಿರುದ್ಧವಾಗಿವೆ. ಈ ಕೆಳಗಿನ ಎರಡು ಉದಾಹರಣೆಗಳನ್ನು ಗಮನಿಸಿ:

  1.  1. ಸೃಷ್ಟಿಯ ಆರು ದಿನಗಳ ದೀರ್ಘಾವಧಿ. ಸೃಷ್ಟಿವಾದಿಗಳು ಸೃಷ್ಟಿಯ ಆರು ದಿನಗಳು 24 ತಾಸಿನ ದಿನಗಳಾಗಿದ್ದವೆಂದು ಭಾವಿಸುತ್ತಾರೆ. ಆದರೆ ಬೈಬಲ್‌ನಲ್ಲಿರುವ “ದಿನ” ಎಂಬ ಪದವು ಗಮನಾರ್ಹ ಕಾಲಾವಧಿಯನ್ನು ಸೂಚಿಸುತ್ತದೆ.​—ಆದಿಕಾಂಡ 2:4; ಕೀರ್ತನೆ 90:4.

  2.  2. ಭೂಮಿಯ ವಯಸ್ಸು. ಸೃಷ್ಟಿವಾದಿಗಳು ಭೂಮಿ ಕೆಲವೇ ಸಾವಿರ ವರ್ಷ ಹಳೆಯದ್ದು ಎಂದು ಭಾವಿಸುತ್ತಾರೆ. ಆದರೆ, ಬೈಬಲ್‌ ಪ್ರಕಾರ ಭೂಮಿ ಮತ್ತು ವಿಶ್ವ ಸೃಷ್ಟಿಯ ಆರು ದಿನಗಳಿಗಿಂತ ಮುಂಚೆಯೇ ಇದ್ದವು. (ಆದಿಕಾಂಡ 1:1) ಆದ್ದರಿಂದ, ಭೂಮಿ ಕೋಟಿಗಟ್ಟಲೆ ವರ್ಷ ಹಳೆಯದ್ದೆಂಬ ವಿಶ್ವಾಸಾರ್ಹ ವೈಜ್ಞಾನಿಕ ಸಂಶೋಧನೆಯನ್ನು ಯೆಹೋವನ ಸಾಕ್ಷಿಗಳು ಆಕ್ಷೇಪಿಸುವುದಿಲ್ಲ.

 ಯೆಹೋವನ ಸಾಕ್ಷಿಗಳಾದ ನಾವು ಸೃಷ್ಟಿಯಲ್ಲಿ ನಂಬಿಕೆ ಇಡುವುದಾದರೂ, ವಿಜ್ಞಾನವನ್ನು ತಿರಸ್ಕರಿಸುವುದಿಲ್ಲ. ವಿಜ್ಞಾನದ ಸತ್ಯತೆಗಳು ಮತ್ತು ಬೈಬಲ್‌ ಒಂದಕ್ಕೊಂದು ಹೊಂದಿಕೆಯಲ್ಲಿವೆ ಎಂದು ನಾವು ನಂಬುತ್ತೇವೆ.