ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?

4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

4 | ದೇವರ ಸಹಾಯದಿಂದ ದ್ವೇಷವನ್ನ ಕಿತ್ತೆಸೆಯಿರಿ

ಬೈಬಲ್‌ ಕಲಿಸೋದು:

“ಪವಿತ್ರಶಕ್ತಿಯಿಂದ ಬರೋ ಗುಣಗಳು ಯಾವುದಂದ್ರೆ ಪ್ರೀತಿ, ಆನಂದ, ಶಾಂತಿ, ತಾಳ್ಮೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯತೆ, ಸ್ವನಿಯಂತ್ರಣ.”ಗಲಾತ್ಯ 5:22, 23.

ಅರ್ಥ ಏನು?

ದೇವರ ಸಹಾಯದಿಂದ ದ್ವೇಷ ಅನ್ನೋ ಸರಪಳಿಯನ್ನು ಕಿತ್ತು ಹಾಕೋಕೆ ಆಗುತ್ತೆ. ಅದಕ್ಕೆ ಸಹಾಯ ಮಾಡೋ ಗುಣಗಳನ್ನು ಬೆಳೆಸಿಕೊಳ್ಳಲು ದೇವರ ಪವಿತ್ರ ಶಕ್ತಿ ನಮಗೆ ಸಹಾಯ ಮಾಡುತ್ತೆ. ನಾವು ನಮ್ಮ ಸ್ವಂತ ಶಕ್ತಿಯಿಂದ ದ್ವೇಷವನ್ನ ಜಯಿಸೋಕೆ ಆಗಲ್ಲ. ಅದಕ್ಕೆ ದೇವರ ಸಹಾಯ ಪಡೆಯಬೇಕು. ಹೀಗೆ ಮಾಡೋದಾದ್ರೆ ನಾವು ಅಪೊಸ್ತಲ ಪೌಲನ ತರ ಹೇಳಬಹುದು. ಅವನು ಹೇಳಿದ್ದು: “ದೇವರಿಂದಾನೇ ನನಗೆ ಎಲ್ಲ ಮಾಡೋಕೆ ಆಗ್ತಿದೆ. ಯಾಕಂದ್ರೆ ನನಗೆ ಬೇಕಾದ ಶಕ್ತಿ ಕೊಡೋದು ಆತನೇ.” (ಫಿಲಿಪ್ಪಿ 4:13) ಅಷ್ಟೇ ಅಲ್ಲ, ಕೀರ್ತನೆಗಾರ ಹೇಳಿದಂತೆ “ಯೆಹೋವನಿಂದ ನನಗೆ ಸಹಾಯ ಸಿಗುತ್ತೆ” ಅಂತ ನಾವೂ ಹೇಳಬಹುದು.—ಕೀರ್ತನೆ 121:2.

ನೀವೇನು ಮಾಡಬಹುದು?

“ಕೆಟ್ಟ ಕೋಪದಿಂದ ಕುದಿಯುತ್ತಿದ್ದ ನನ್ನನ್ನ ಯೆಹೋವ ದೇವರು ಶಾಂತ ವ್ಯಕ್ತಿಯನ್ನಾಗಿ ಮಾಡಿದ್ರು.” —ವಾಲ್ಡೋ

ಪವಿತ್ರ ಶಕ್ತಿಯ ಸಹಾಯ ಪಡೆಯೋಕೆ ಯೆಹೋವನ ಹತ್ತಿರ ಪ್ರಾರ್ಥಿಸಿ. (ಲೂಕ 11:13) ದ್ವೇಷವನ್ನು ಕಿತ್ತೆಸೆಯಲು ಸಹಾಯ ಮಾಡೋ ಒಳ್ಳೆ ಗುಣಗಳನ್ನು ಬೆಳೆಸಿಕೊಳ್ಳಲು ಸಹ ಆತನ ಸಹಾಯ ಕೇಳಿ. ಇದಕ್ಕೆ ಸಹಾಯ ಮಾಡೋ ಆ ಗುಣಗಳು ಯಾವುದಂದ್ರೆ ಪ್ರೀತಿ, ಶಾಂತಿ, ತಾಳ್ಮೆ ಮತ್ತು ಸ್ವನಿಯಂತ್ರಣ. ಬೈಬಲ್‌ ಈ ಗುಣಗಳ ಬಗ್ಗೆ ಏನು ಹೇಳುತ್ತೆ ಅಂತ ಕಲಿತು ಅದನ್ನ ನಿಮ್ಮ ಜೀವನದಲ್ಲಿ ತೋರಿಸಿ. ಅಷ್ಟೇ ಅಲ್ಲ, ಅದನ್ನು ತೋರಿಸುವವರ ಜೊತೆ ಸ್ನೇಹ ಮಾಡಿ. ಇಂಥ ಸ್ನೇಹಿತರು “ಪ್ರೀತಿ ತೋರಿಸೋಕೆ, ಒಳ್ಳೇ ಕೆಲಸಗಳನ್ನ ಮಾಡೋಕೆ [ನಿಮಗೆ] ಪ್ರೋತ್ಸಾಹ ಕೊಡಬಹುದು.”—ಇಬ್ರಿಯ 10:24.