ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಓದುಗರ ಪ್ರಶ್ನೆ . . .

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಕಲಿಸುತ್ತಾರಾ?

ಯೆಹೋವನ ಸಾಕ್ಷಿಗಳಲ್ಲಿ ಸ್ತ್ರೀಯರು ಕಲಿಸುತ್ತಾರಾ?

ಹೌದು, ಕಲಿಸುತ್ತಾರೆ. ಯೆಹೋವನ ಸಾಕ್ಷಿಗಳಲ್ಲಿ ಲಕ್ಷಾಂತರ ಸ್ತ್ರೀಯರು ಸಿಹಿಸುದ್ದಿ ಸಾರುತ್ತಿದ್ದಾರೆ. ಅದಕ್ಕೆ ಕೀರ್ತನೆ 68:11ರಲ್ಲಿ ಅವರ ಬಗ್ಗೆ ಹೀಗಿದೆ: “ಯೆಹೋವ ಆಜ್ಞೆ ಕೊಡ್ತಾನೆ ಸಿಹಿಸುದ್ದಿಯನ್ನ ಹೇಳೋ ಸ್ತ್ರೀಯರು ಒಂದು ದೊಡ್ಡ ಸೈನ್ಯದ ತರ ಇದ್ದಾರೆ.”

ಆದರೆ ಯೆಹೋವನ ಸಾಕ್ಷಿಗಳ ಸ್ತ್ರೀಯರು ಕಲಿಸೋದಕ್ಕೂ ಬೇರೆ ಪಂಗಡಗಳ ಮಹಿಳಾ ಪಾದ್ರಿಗಳು ಕಲಿಸೋದಕ್ಕೂ ತುಂಬ ವ್ಯತ್ಯಾಸ ಇದೆ. ಹಾಗಿದ್ರೆ ಯಾವ ವ್ಯತ್ಯಾಸ ಇದೆ?

ಸಾಮಾನ್ಯವಾಗಿ ಮಹಿಳಾ ಪಾದ್ರಿಗಳು ಚರ್ಚಿನಲ್ಲಿ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕಲಿಸುತ್ತಾರೆ. ಆದರೆ ಯೆಹೋವನ ಸಾಕ್ಷಿಗಳ ಸ್ತ್ರೀಯರು ಸಭೆಯ ಹೊರಗೆ ಕಲಿಸುತ್ತಾರೆ. ಅಂದರೆ ಅವರು ದಿನನಿತ್ಯ ಭೇಟಿ ಮಾಡೋರಿಗೆ ಸಾರುತ್ತಾರೆ. ಉದಾಹರಣೆಗೆ, ಮನೆ ಮನೆಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಸಿಹಿಸುದ್ದಿಯನ್ನ ಸಾರುತ್ತಾರೆ.

ಮಹಿಳಾ ಪಾದ್ರಿಗಳಿಗೂ ಮತ್ತು ಯೆಹೋವನ ಸಾಕ್ಷಿಗಳ ಸ್ತ್ರೀಯರಿಗೂ ಇರುವ ಇನ್ನೊಂದು ವ್ಯತ್ಯಾಸ ಏನಂದ್ರೆ ಮಹಿಳಾ ಪಾದ್ರಿಗಳು ತಮ್ಮ ಸಿದ್ಧಾಂತಗಳನ್ನ ಚರ್ಚಿನಲ್ಲಿರೋರಿಗೆ ಬೋಧನೆ ಮಾಡುತ್ತಾರೆ. ಆದರೆ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಕಲಿಸುವ ಜವಾಬ್ದಾರಿ ಇರೋದು ಪುರುಷರಿಗೆ ಮಾತ್ರ. ಹಾಗಾಗಿ ದೀಕ್ಷಾಸ್ನಾನ ಪಡೆದಿರುವ ಸಹೋದರ ಸಭೆಯಲ್ಲಿ ಇದ್ದರೆ ಸ್ತ್ರೀಯರು ಕಲಿಸೋದಿಲ್ಲ.—1 ತಿಮೊತಿ 3:2; ಯಾಕೋಬ 3:1.

ಸಭೆಯಲ್ಲಿ ಪುರುಷರೇ ಮೇಲ್ವಿಚಾರಕರು ಆಗಿರಬೇಕು ಅಂತ ಬೈಬಲ್‌ ಹೇಳುತ್ತೆ. ಹಾಗಾಗಿ ಅಪೊಸ್ತಲ ಪೌಲ, “ಪ್ರತಿಯೊಂದು ಪಟ್ಟಣದಲ್ಲಿ ಹಿರಿಯರನ್ನ ನೇಮಿಸಬೇಕು ಅಂತ ನಾನು ನಿನ್ನನ್ನ ಕ್ರೇತದಲ್ಲಿ ಬಿಟ್ಟು ಬಂದೆ” ಅಂತ ತೀತನಿಗೆ ಹೇಳಿದ. ಅಷ್ಟೇ ಅಲ್ಲ ಹಿರಿಯನಾಗುವವನ ಮೇಲೆ “ಯಾವ ಆರೋಪನೂ ಇರಬಾರದು. ಅವನಿಗೆ ಒಬ್ಬಳೇ ಹೆಂಡತಿ ಇರಬೇಕು” ಅಂತನೂ ಹೇಳಿದ. (ತೀತ 1:5, 6) ತಿಮೊತಿಗೆ ಬರೆದ ಪತ್ರದಲ್ಲಿ ಪೌಲ ಇದೇ ತರದ ನಿರ್ದೇಶನಗಳನ್ನ ಕೊಡುತ್ತಾನೆ: “ಒಬ್ಬನು ಮೇಲ್ವಿಚಾರಕನಾಗೋಕೆ ಪ್ರಯತ್ನಿಸಿದ್ರೆ ಅವನು ಒಳ್ಳೇದು ಮಾಡೋಕೆ ಇಷ್ಟಪಡ್ತಿದ್ದಾನೆ. ಹಾಗಾಗಿ ಮೇಲ್ವಿಚಾರಕ ಹೇಗಿರಬೇಕಂದ್ರೆ, ಅವನ ಮೇಲೆ ಯಾವ ಆರೋಪನೂ ಇರಬಾರ್ದು, ಅವನಿಗೆ ಒಬ್ಬಳೇ ಹೆಂಡತಿ ಇರಬೇಕು. . . . ಕಲಿಸೋ ಸಾಮರ್ಥ್ಯ ಇರಬೇಕು.”—1 ತಿಮೊತಿ 3:1, 2.

ಸಭೆಯ ಮೇಲ್ವಿಚಾರಣೆಯನ್ನ ಯಾಕೆ ಪುರುಷರೇ ಮಾಡಬೇಕು? ಪೌಲ ಹೀಗೆ ಹೇಳುತ್ತಾನೆ: “ಬೋಧನೆ ಮಾಡೋಕೆ, ಪುರುಷನ ಮೇಲೆ ಅಧಿಕಾರ ನಡಿಸೋಕೆ ನಾನು ಸ್ತ್ರೀಗೆ ಅನುಮತಿ ಕೊಡಲ್ಲ. ಅವಳು ಸುಮ್ನೆ ಇರಬೇಕು. ಯಾಕಂದ್ರೆ ಮೊದ್ಲು ಸೃಷ್ಟಿಯಾಗಿದ್ದು ಆದಾಮ, ಆಮೇಲೆ ಹವ್ವ.” (1 ತಿಮೊತಿ 2:12, 13) ಇದರಿಂದ ಸಭೆಯಲ್ಲಿ ಮೇಲ್ವಿಚಾರಣೆ ಮಾಡುವ ಮತ್ತು ಕಲಿಸುವ ಜವಾಬ್ದಾರಿಯನ್ನ ಯೆಹೋವ ದೇವರು ಪುರುಷರಿಗೇ ಕೊಟ್ಟಿರೋದು ಅಂತ ಗೊತ್ತಾಗುತ್ತೆ.

ಯೆಹೋವನ ಸಾಕ್ಷಿಗಳು ಸಿಹಿಸುದ್ದಿ ಸಾರೋದ್ರಲ್ಲಿ ತಮ್ಮ ನಾಯಕನಾದ ಯೇಸುವನ್ನ ಅನುಕರಿಸುತ್ತಾರೆ. ಯೇಸುವಿನ ಶಿಷ್ಯನಾದ ಲೂಕ ಆತನ ಸೇವೆಯ ಬಗ್ಗೆ ಹೀಗೆ ಹೇಳುತ್ತಾನೆ: “ಯೇಸು ಪಟ್ಟಣದಿಂದ ಪಟ್ಟಣಕ್ಕೆ, ಹಳ್ಳಿಯಿಂದ ಹಳ್ಳಿಗೆ ಹೋಗಿ ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಿದನು.” ನಂತರ ಯೇಸು ತನ್ನ ಶಿಷ್ಯರನ್ನೂ ಸಿಹಿಸುದ್ದಿ ಸಾರೋಕೆ ಕಳಿಸಿದನು. “ಆಗ ಶಿಷ್ಯರು ಆ ಪ್ರದೇಶದಲ್ಲಿದ್ದ ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಸಿಹಿಸುದ್ದಿ ಸಾರಿದ್ರು.”—ಲೂಕ 8:1; 9:2-6.

ಇವತ್ತು ಯೆಹೋವನ ಸಾಕ್ಷಿಗಳಾಗಿರುವ ಪುರುಷರು ಮತ್ತು ಸ್ತ್ರೀಯರು ಯೇಸು ಹೇಳಿದ ಕೆಲಸವನ್ನ ಹುರುಪಿನಿಂದ ಮಾಡುತ್ತಿದ್ದಾರೆ. ಅದು ಯಾವುದಂದ್ರೆ, “ದೇವರ ಆಳ್ವಿಕೆಯ ಈ ಸಿಹಿಸುದ್ದಿ ಲೋಕದಲ್ಲಿ ಇರೋ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುತ್ತೆ. ಆಮೇಲೆ ಅಂತ್ಯ ಬರುತ್ತೆ.”—ಮತ್ತಾಯ 24:14.