ಯೋಬ 22:1-30

  • ಎಲೀಫಜನ ಮೂರನೇ ಸಲದ ಮಾತುಗಳು (1-30)

    • “ಮನುಷ್ಯನಿಂದ ದೇವರಿಗೇನು ಪ್ರಯೋಜನ?” (2, 3)

    • ಯೋಬ ಅನ್ಯಾಯಗಾರ, ಆಸೆಬುರುಕ ಅಂತ ಆರೋಪ (6-9)

    • ‘ದೇವರ ಹತ್ರ ವಾಪಸ್‌ ಬಂದ್ರೆ ಮುಂಚಿನ ತರ ಆಗ್ತೀಯ’ (23)

22  ಅದಕ್ಕೆ ತೇಮಾನ್ಯನಾದ ಎಲೀಫಜ+ ಹೀಗಂದ:   “ಮನುಷ್ಯನಿಂದ ದೇವರಿಗೇನು ಪ್ರಯೋಜನ? ಯಾರಾದ್ರೂ ವಿವೇಚನೆಯಿಂದ* ನಡ್ಕೊಂಡ್ರೆ ಆತನಿಗೇನು ಲಾಭ?+   ನೀನು ನೀತಿವಂತ ಆಗಿರೋದನ್ನ ನೋಡಿ ಸರ್ವಶಕ್ತ ಸಂತೋಷ ಪಡ್ತಾನಾ? ನೀನು ನಿಯತ್ತಿಂದ* ನಡ್ಕೊಂಡ್ರೆ ಆತನಿಗೇನಾದ್ರೂ ಪ್ರಯೋಜನ ಇದ್ಯಾ?+   ನೀನು ದೇವ್ರಿಗೆ ಭಯಭಕ್ತಿ ತೋರಿಸಿದ್ರೆಆತನು ನಿನ್ನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗ್ತಾನಾ, ನಿನಗೆ ಶಿಕ್ಷೆ ಕೊಡ್ತಾನಾ?   ನಿನ್ನ ಕೆಟ್ಟತನ ತುಂಬಿ ತುಳುಕ್ತಾ ಇರೋದ್ರಿಂದಲೆಕ್ಕ ಇಲ್ಲದಷ್ಟು ತಪ್ಪು ಮಾಡಿರೋದ್ರಿಂದದೇವರು ನಿನಗೆ ಶಿಕ್ಷೆ ಕೊಟ್ಟಿದ್ದಾನೆ.+   ನೀನು ನಿನ್ನ ಸಹೋದರರಿಂದ ಅನ್ಯಾಯವಾಗಿ ಒತ್ತೆ ಇಡಿಸಿದೆ,ಬಡವ್ರಿಂದ* ಬಟ್ಟೆ ಕಿತ್ಕೊಂಡು ಅವ್ರನ್ನ ಬೆತ್ತಲೆ ಮಾಡಿದೆ.+   ದಣಿದು ಸುಸ್ತಾದವ್ರಿಗೆ ನೀನು ಒಂದು ತೊಟ್ಟು ನೀರು ಕೊಡಲಿಲ್ಲ,ಹಸಿದವ್ರಿಗೆ ಊಟ ಕೊಡಲಿಲ್ಲ.+   ಶಕ್ತಿ ಇರುವವರು ದೇಶವನ್ನ ವಶ ಮಾಡ್ಕೊಳ್ತಾರೆ,+ದೊಡ್ಡ ದೊಡ್ಡ ಜನ್ರು ಆ ದೇಶದಲ್ಲಿ ವಾಸಿಸ್ತಾರೆ.   ನೀನು ವಿಧವೆಯರನ್ನ ಬರಿಗೈಯಲ್ಲಿ ಕಳಿಸಿದೆ,ಅನಾಥ ಮಕ್ಕಳಿಗೆ* ಕಷ್ಟ ಕೊಟ್ಟೆ. 10  ಅದಕ್ಕೇ ನಿನ್ನ ಸುತ್ತ ಅಪಾಯ ಸುತ್ಕೊಂಡಿದೆ,+ಅಚಾನಕ್ಕಾಗಿ ದಿಗಿಲು ಬಡಿದು ನೀನು ನಡುಗಿ ಹೋಗಿದ್ದೀಯ. 11  ನಿನ್ನ ಮುಂದೆ ಬರೀ ಕತ್ತಲೆ ಕವಿದು ಏನೂ ಕಾಣಿಸ್ತಿಲ್ಲ,ಪ್ರವಾಹದ ನೀರು ನಿನ್ನನ್ನ ಮುಳುಗಿಸಿಬಿಟ್ಟಿದೆ. 12  ದೇವರು ಎತ್ರದಲ್ಲಿರೋ ಆಕಾಶದಲ್ಲಿ ಇದ್ದಾನಲ್ಲಾ,ನಕ್ಷತ್ರಗಳನ್ನ ಸ್ವಲ್ಪ ನೋಡು, ಅವು ಎಷ್ಟೋ ಎತ್ರದಲ್ಲಿವೆ. 13  ಆದ್ರೆ ನೀನು ಏನಂದೆ? ‘ದೇವ್ರಿಗೆ ಏನು ಗೊತ್ತು? ಕಾರ್ಮೋಡಗಳ ಹಿಂದೆ ನಿಂತು ನಮಗೆ ತೀರ್ಪು ಕೊಡೋಕೆ ಆತನಿಗೆ ಆಗುತ್ತಾ? 14  ಆತನು ಆಕಾಶದ ಅಂಚಲ್ಲಿ* ನಡೀತಾನೆ,ಆತನಿಗೆ ಮೋಡ ಪರದೆ ತರ ಅಡ್ಡ ಇದೆ, ನಮ್ಮನ್ನ ಹೇಗೆ ನೋಡೋಕೆ ಆಗುತ್ತೆ’ ಅಂದ್ಯಲ್ಲಾ. 15  ಹಳೇ ಕಾಲದಿಂದ ಕೆಟ್ಟವರು ನಡೀತಾ ಇರೋ ದಾರಿಯಲ್ಲೇ ನೀನು ನಡಿತೀಯಾ? 16  ಆ ಜನ್ರು ಅರ್ಧ ಆಯಸ್ಸಲ್ಲೇ ಸತ್ತು ಹೋಗಿದ್ದಾರೆ,ಕಟ್ಟಡದ ಅಡಿಪಾಯ ಪ್ರವಾಹಕ್ಕೆ* ಕೊಚ್ಚಿ ಹೋಗೋ ಹಾಗೆ ನಾಶ ಆಗಿದ್ದಾರೆ.+ 17  ಅವರು ಸತ್ಯ ದೇವ್ರಿಗೆ ‘ನಮ್ಮನ್ನ ಬಿಟ್ಟುಬಿಡು!’ ಅಂತ ಹೇಳ್ತಿದ್ರು,‘ಸರ್ವಶಕ್ತ ನಮಗೇನೂ ಮಾಡೋಕ್ಕಾಗಲ್ಲ’ ಅಂತ ಹೇಳ್ತಿದ್ರು. 18  ಆದ್ರೆ ಅವ್ರ ಮನೆಗಳಲ್ಲಿ ಒಳ್ಳೊಳ್ಳೇ ವಸ್ತುಗಳನ್ನ ತುಂಬಿಸಿದವನು ದೇವ್ರೇ. (ಆ ಕೆಟ್ಟವ್ರ ತರ ನಾನು ಯೋಚಿಸಲ್ಲ.) 19  ಕೆಟ್ಟವರು ನಾಶ ಆಗೋದನ್ನ ನೋಡಿ ನೀತಿವಂತರು ಖುಷಿಪಡ್ತಾರೆ,ತಪ್ಪು ಮಾಡದವರು ಕೆಟ್ಟವ್ರನ್ನ ಅಣಕಿಸ್ತಾ: 20  ‘ನಮ್ಮ ವಿರೋಧಿಗಳೆಲ್ಲ ನಾಶ ಆದ್ರು,ಉಳಿದಿರೋ ಅವ್ರ ವಸ್ತುಗಳನ್ನೆಲ್ಲ ಬೆಂಕಿ ಸುಟ್ಟುಹಾಕುತ್ತೆ’ ಅಂತಾರೆ. 21  ನೀನು ದೇವ್ರನ್ನ ಚೆನ್ನಾಗಿ ತಿಳ್ಕೊ,ಆಗ ಆತನ ಜೊತೆ ಸಂಬಂಧ ಚೆನ್ನಾಗಿ ಇರುತ್ತೆ,ನಿನ್ನ ಬಾಳಲ್ಲಿ ಎಲ್ಲ ಒಳ್ಳೇದಾಗುತ್ತೆ. 22  ಆತನು ಕೊಡೋ ನಿಯಮಗಳನ್ನ ಪಾಲಿಸು,ಆತನ ಮಾತುಗಳನ್ನೆಲ್ಲ ನಿನ್ನ ಹೃದಯದಲ್ಲಿ ಇಟ್ಕೊ.+ 23  ನೀನು ಸರ್ವಶಕ್ತನ ಹತ್ರ ವಾಪಸ್‌ ಬಂದ್ರೆ,ಮತ್ತೆ ಮುಂಚಿನ ತರ ಆಗ್ತೀಯ.+ ನಿನ್ನ ಡೇರೆಯಿಂದ ಕೆಟ್ಟದನ್ನ ತೆಗೆದುಹಾಕಿದ್ರೆ, 24  ನಿನ್ನ ಚಿನ್ನವನ್ನ* ಮಣ್ಣಿಗೆ ಬಿಸಾಡಿದ್ರೆ,ಓಫೀರಿನ+ ಚಿನ್ನವನ್ನ ಬಂಡೆಗಳ ಕಣಿವೆಗೆ ಎಸೆದ್ರೆ, 25  ಆಗ ಸರ್ವಶಕ್ತನೇ ನಿನಗೆ ಚಿನ್ನವಾಗ್ತಾನೆ,*ಆತನು ನಿನಗೆ ಅಪ್ಪಟ ಬೆಳ್ಳಿ ಆಗ್ತಾನೆ. 26  ಆಗ ಸರ್ವಶಕ್ತನಿಂದಾಗಿ ನೀನು ಸಂತೋಷವಾಗಿ ಇರ್ತಿಯ,ತಲೆಯೆತ್ತಿ ದೇವರ ಕಡೆ ನೋಡು. 27  ಪ್ರಾರ್ಥನೆ ಮಾಡು, ಆತನು ಕೇಳ್ತಾನೆ,ನಿನ್ನ ಹರಕೆಗಳನ್ನ ತೀರಿಸು. 28  ನೀನು ಮಾಡಬೇಕಂತ ಯೋಚ್ನೆ ಮಾಡಿದೆಲ್ಲ ನಡಿಯುತ್ತೆ,ನಿನ್ನ ದಾರೀಲಿ ಬೆಳಕಿರುತ್ತೆ. 29  ನೀನು ಸೊಕ್ಕಿಂದ ಮಾತಾಡಿದ್ರೆ ನಿನ್ನ ಸೊಕ್ಕು ಮುರಿತಾನೆ,ಆತನು ದೀನರನ್ನ ಮಾತ್ರ ಕಾಪಾಡ್ತಾನೆ. 30  ತಪ್ಪು ಮಾಡದವ್ರನ್ನ ಕಾಪಾಡ್ತಾನೆ,ಹಾಗಾಗಿ ನಿನ್ನ ಕೈಗಳಲ್ಲಿ ಪಾಪದ ಕೊಳೆ ಇಲ್ಲಾಂದ್ರೆನಿನ್ನನ್ನ ಖಂಡಿತ ರಕ್ಷಿಸ್ತಾನೆ.”

ಪಾದಟಿಪ್ಪಣಿ

ಅಕ್ಷ. “ಒಳನೋಟ.”
ಅಥವಾ “ಸಮಗ್ರತೆಯಿಂದ.”
ಅಕ್ಷ. “ಬೆತ್ತಲೆಯಾಗಿರೋ ಜನ್ರಿಂದ.”
ಅಥವಾ “ತಂದೆಯಿಲ್ಲದ ಮಕ್ಕಳಿಗೆ.”
ಅಥವಾ “ವೃತ್ತ, ಗುಮ್ಮಟದಲ್ಲಿ.”
ಅಕ್ಷ. “ನದಿ.”
ಅಥವಾ “ಚಿನ್ನದ ಗಟ್ಟಿಗಳನ್ನ.”
ಅಥವಾ “ಚಿನ್ನದ ಗಟ್ಟಿಯಾಗ್ತಾನೆ.”