ಎರಡನೇ ಅರಸು 12:1-21

  • ಯೆಹೋವಾಷ, ಯೆಹೂದದ ರಾಜ (1-3)

  • ಯೆಹೋವಾಷ ದೇವಾಲಯದ ದುರಸ್ತಿ ಕೆಲಸ ಮಾಡಿದ (4-16)

  • ಅರಾಮ್ಯರ ದಾಳಿ (17, 18)

  • ಯೆಹೋವಾಷನನ್ನ ಕೊಲ್ಲಲಾಯ್ತು (19-21)

12  ಯೇಹುವಿನ+ ಆಳ್ವಿಕೆಯ ಏಳನೇ ವರ್ಷದಲ್ಲಿ ಯೆಹೋವಾಷ+ ರಾಜನಾದ. ಅವನು ಯೆರೂಸಲೇಮಲ್ಲಿ 40 ವರ್ಷ ಆಳಿದ. ಅವನ ತಾಯಿ ಹೆಸ್ರು ಚಿಬ್ಯ. ಅವಳು ಬೇರ್ಷೆಬ ಊರಿನವಳು.+  ಎಲ್ಲಿ ತನಕ ಪುರೋಹಿತ ಯೆಹೋಯಾದ ಯೆಹೋವಾಷನನ್ನ ಮಾರ್ಗದರ್ಶಿಸ್ತಾ ಇದ್ದನೋ ಅಲ್ಲಿ ತನಕ ಅವನು ಯೆಹೋವನಿಗೆ ಇಷ್ಟ ಆಗೋದನ್ನೇ ಮಾಡ್ತಾ ಇದ್ದ.  ಹಾಗಿದ್ರೂ ಅವನು ಪೂಜಾ ಸ್ಥಳಗಳನ್ನ+ ತೆಗೆದುಹಾಕಿರಲಿಲ್ಲ. ಜನ್ರು ಇನ್ನೂ ಆ ಸ್ಥಳಗಳಲ್ಲಿ ಬಲಿ ಅರ್ಪಿಸಿ ಬಲಿಯ ಹೊಗೆ ಏರೋ ತರ ಮಾಡ್ತಿದ್ರು.  ಯೆಹೋವಾಷ ಪುರೋಹಿತರಿಗೆ “ಪವಿತ್ರ ಅರ್ಪಣೆಗಳಿಗಾಗಿ ಯೆಹೋವನ ಆಲಯಕ್ಕೆ ತಗೊಂಡು ಬರೋ ಎಲ್ಲಾ ಹಣ ತಗೊಳ್ಳಿ.+ ಅಂದ್ರೆ ಪ್ರತಿಯೊಬ್ಬ ವ್ಯಕ್ತಿ ಕೊಡಬೇಕಾದ ತೆರಿಗೆ ಹಣ,+ ಒಬ್ಬ ವ್ಯಕ್ತಿಗೆ ನಿರ್ಧರಿಸಿರೋ ಹಣ, ಮನಸಾರೆ ಯೆಹೋವನ ಆಲಯಕ್ಕೆ ತರೋ ಹಣವನ್ನ ತಗೊಳ್ಳಿ.+  ಪುರೋಹಿತರೇ ಹೋಗಿ ದಾನಿಗಳ ಕೈಯಿಂದ ಹಣ ಒಟ್ಟುಸೇರಿಸಬೇಕು. ದೇವಾಲಯದಲ್ಲಿ ಎಲ್ಲಿಯಾದ್ರೂ ಬಿರುಕು ಕಂಡುಬಂದ್ರೆ ಅದ್ರ ದುರಸ್ತಿಗಾಗಿ ಆ ಹಣವನ್ನ ಉಪಯೋಗಿಸಬೇಕು”+ ಅಂದ.  ಯೆಹೋವಾಷನ ಆಳ್ವಿಕೆಯ 23ನೇ ವರ್ಷದ ತನಕ ಪುರೋಹಿತರು ದೇವಾಲಯದ ದುರಸ್ತಿ ಮಾಡಲಿಲ್ಲ.+  ಹಾಗಾಗಿ ರಾಜ ಯೆಹೋವಾಷ ಪುರೋಹಿತ ಯೆಹೋಯಾದನನ್ನ+ ಮತ್ತು ಬೇರೆ ಪುರೋಹಿತರನ್ನ ಕರೆದು “ದೇವಾಲಯದ ದುರಸ್ತಿ ಕೆಲಸವನ್ನ ಯಾಕೆ ಮಾಡಿಸಲಿಲ್ಲ? ದಾನಿಗಳ ಹಣವನ್ನ ನೀವು ಆ ಕೆಲಸಕ್ಕಾಗಿ ಉಪಯೋಗಿಸದಿದ್ರೆ ಇನ್ಮುಂದೆ ಯಾರ ಹತ್ರನೂ ಹಣ ತಗೊಳ್ಳಬೇಡಿ”+ ಅಂದ.  ಆಗ ಪುರೋಹಿತರು ದಾನಿಗಳಿಂದ ಹಣ ತಗೊಳ್ಳೋ, ದುರಸ್ತಿ ಕೆಲಸ ಮಾಡಿಸೋ ಜವಾಬ್ದಾರಿಯನ್ನ ವಾಪಸ್‌ ರಾಜನಿಗೆ ಒಪ್ಪಿಸಿಬಿಟ್ರು.  ಆಮೇಲೆ ಪುರೋಹಿತ ಯೆಹೋಯಾದ ಒಂದು ಪೆಟ್ಟಿಗೆ ತಗೊಂಡು+ ಅದ್ರ ಮುಚ್ಚಳಕ್ಕೆ ತೂತು ಮಾಡಿ ಅದನ್ನ ಯೆಹೋವನ ಆಲಯದ ಬಾಗಿಲ ಬಲಭಾಗಕ್ಕೆ ಇರೋ ಯಜ್ಞವೇದಿ ಹತ್ರ ಇಟ್ಟ. ಜನ ಯೆಹೋವನ ಆಲಯಕ್ಕೆ ತರ್ತಿದ್ದ ಎಲ್ಲಾ ಹಣವನ್ನ ಬಾಗಿಲು ಕಾಯುವವರಾಗಿ ಸೇವೆ ಮಾಡ್ತಿದ್ದ ಪುರೋಹಿತರು ಅದ್ರಲ್ಲಿ ಹಾಕ್ತಿದ್ರು.+ 10  ಆ ಪೆಟ್ಟಿಗೆಯಲ್ಲಿ ಹಣ ತುಂಬಿದಾಗ ರಾಜನ ಕಾರ್ಯದರ್ಶಿಗೆ, ಮಹಾ ಪುರೋಹಿತನಿಗೆ ಹೇಳ್ತಿದ್ರು. ಅವರಿಬ್ರು ಬಂದು ಯೆಹೋವನ ಆಲಯಕ್ಕೆ ಬಂದ ಆ ಹಣವನ್ನ ತೆಗೆದು* ಲೆಕ್ಕ ಮಾಡ್ತಿದ್ರು.+ 11  ಆಮೇಲೆ ಅದನ್ನ ಯೆಹೋವನ ಆಲಯದ ಕೆಲಸ ನೋಡ್ಕೊಳ್ತಿದ್ದ ಮೇಲ್ವಿಚಾರಕರಿಗೆ ಒಪ್ಪಿಸ್ತಿದ್ರು. ಆ ಮೇಲ್ವಿಚಾರಕರು ಅದನ್ನ ಯೆಹೋವನ ಆಲಯದಲ್ಲಿ ಬಡಗಿ ಕೆಲಸ ಮಾಡುವವ್ರಿಗೆ, ಕಟ್ಟೋ ಕೆಲಸ ಮಾಡುವವ್ರಿಗೆ ಕೊಡ್ತಿದ್ರು.+ 12  ಅಷ್ಟೇ ಅಲ್ಲ ಮೇಸ್ತ್ರಿಗಳಿಗೆ, ಕಲ್ಲು ಒಡೆಯುವವ್ರಿಗೆ ಆ ಹಣ ಕೊಡ್ತಿದ್ರು. ಯೆಹೋವನ ಆಲಯದ ದುರಸ್ತಿಗಾಗಿ ಮರಗಳನ್ನ, ಕತ್ತರಿಸಿದ ಕಲ್ಲುಗಳನ್ನ ಸಹ ಆ ಹಣದಿಂದ ಖರೀದಿಸ್ತಿದ್ರು. ಆಲಯದ ದುರಸ್ತಿ ಕೆಲಸದ ಎಲ್ಲ ಖರ್ಚಿಗಾಗಿ ಈ ಹಣವನ್ನೇ ಉಪಯೋಗಿಸ್ತಿದ್ರು. 13  ಯೆಹೋವನ ಆಲಯಕ್ಕೆ ತರ್ತಿದ್ದ ಹಣವನ್ನ ಯೆಹೋವನ ಆಲಯದ ದುರಸ್ತಿಗಾಗಿ ಬಳಸ್ತಿದ್ರೇ ಹೊರತು ಆಲಯದಲ್ಲಿ ಉಪಯೋಗಿಸೋ ಬೆಳ್ಳಿಯ ಬೋಗುಣಿ, ದೀಪಶಾಮಕ, ಬಟ್ಟಲು, ತುತ್ತೂರಿ+ ಅಥವಾ ಬೆಳ್ಳಿಬಂಗಾರದ ಯಾವುದೇ ಉಪಕರಣಗಳನ್ನ ಮಾಡೋಕೆ ಬಳಸ್ತಿರಲಿಲ್ಲ.+ 14  ಯಾರು ಕೆಲಸ ಮಾಡ್ತಿದ್ರೋ ಅವ್ರಿಗೆ ಮಾತ್ರ ಆ ಹಣವನ್ನ ಕೊಡ್ತಿದ್ರು. ಅವರು ಅದ್ರಿಂದ ಯೆಹೋವನ ಆಲಯದ ದುರಸ್ತಿ ಕೆಲಸಗಳನ್ನ ಮಾಡ್ತಿದ್ರು. 15  ಕೆಲಸಗಾರರಿಗೆ ಹಣ ಕೊಡ್ತಿದ್ದ ಮೇಲ್ವಿಚಾರಕರಿಂದ ಯಾವುದೇ ಲೆಕ್ಕ ಕೇಳ್ತಾ ಇರಲಿಲ್ಲ. ಯಾಕಂದ್ರೆ ಅವರು ನಂಬಿಗಸ್ತರಾಗಿದ್ರು.+ 16  ದೋಷಪರಿಹಾರಕ ಬಲಿಗಾಗಿ+ ಕೊಡ್ತಿದ್ದ ಹಣವನ್ನ ಮತ್ತು ಪಾಪಪರಿಹಾರಕ ಬಲಿಗಾಗಿ ಕೊಡ್ತಿದ್ದ ಹಣವನ್ನ ಯೆಹೋವನ ಆಲಯಕ್ಕೆ ತರ್ತಾ ಇರಲಿಲ್ಲ. ಆ ಹಣ ಪುರೋಹಿತರಿಗೆ ಸೇರಿದ್ದಾಗಿತ್ತು.+ 17  ಆ ಸಮಯದಲ್ಲೇ ಅರಾಮ್ಯರ ರಾಜ ಹಜಾಯೇಲ+ ಗತ್‌+ ಊರಿನ ವಿರುದ್ಧ ಯುದ್ಧ ಮಾಡಿ ಅದನ್ನ ಸ್ವಾಧೀನ ಮಾಡ್ಕೊಂಡ. ಆಮೇಲೆ ಅವನು ಯೆರೂಸಲೇಮಿನ ಮೇಲೆ ದಾಳಿ* ಮಾಡೋಕೆ ತೀರ್ಮಾನಿಸಿದ.+ 18  ಆಗ ಯೆಹೂದದ ರಾಜ ಯೆಹೋವಾಷ ತನ್ನ ಪೂರ್ವಜರೂ ಯೆಹೂದದ ರಾಜರೂ ಆದ ಯೆಹೋಷಾಫಾಟ, ಯೆಹೋರಾಮ, ಅಹಜ್ಯರು ದೇವರಿಗಂತ ಮೀಸಲಿಟ್ಟಿದ್ದ ಎಲ್ಲ ಪವಿತ್ರ ಅರ್ಪಣೆಗಳನ್ನ ಮತ್ತು ತನ್ನ ಸ್ವಂತ ಪವಿತ್ರ ಅರ್ಪಣೆಗಳನ್ನ, ಯೆಹೋವನ ಆಲಯದಲ್ಲಿದ್ದ ಖಜಾನೆಗಳಲ್ಲಿನ ಎಲ್ಲ ಬಂಗಾರವನ್ನ ಮತ್ತು ರಾಜನ ಅರಮನೆಯಲ್ಲಿದ್ದ ಎಲ್ಲ ಬಂಗಾರವನ್ನ ಅರಾಮ್ಯರ ರಾಜ ಹಜಾಯೇಲನಿಗೆ ಕೊಟ್ಟು ಕಳಿಸಿದ.+ ಆಗ ಹಜಾಯೇಲ ಯೆರೂಸಲೇಮಿನ ಮೇಲೆ ಘೋಷಿಸಿದ ದಾಳಿಯನ್ನ ಹಿಂದೆ ತಗೊಂಡ. 19  ಯೆಹೋವಾಷನ ಉಳಿದ ಜೀವನಚರಿತ್ರೆ, ಅವನು ಮಾಡಿದ ಎಲ್ಲ ವಿಷ್ಯ ಯೆಹೂದದ ರಾಜರ ಕಾಲದ ಇತಿಹಾಸ ಪುಸ್ತಕದಲ್ಲಿ ಇದೆ. 20  ಅವನ ವಿರುದ್ಧ ಸಂಚು ಮಾಡಿದ್ದವ್ರ ಜೊತೆ ಅವನ ಸೇವಕರು ಕೈಜೋಡಿಸಿ+ ಸಿಲ್ಲಾಗೆ ಹೋಗೋ ದಾರಿಯಲ್ಲಿದ್ದ ಬೆತ್‌-ಮಿಲ್ಲೋ ಕೋಟೆಯಲ್ಲಿ ಯೆಹೋವಾಷನನ್ನ ಸಾಯಿಸಿದ್ರು.+ 21  ಶಿಮೆಯಾತನ ಮಗ ಯೋಜಾಕಾರ್‌, ಶೋಮೇರನ ಮಗ ಯೆಹೋದಾಬಾದ್‌ ಅನ್ನೋ ಸೇವಕರು ಅವನ ಮೇಲೆ ದಾಳಿ ಮಾಡಿ ಅವನನ್ನ ಸಾಯಿಸಿದ್ರು.+ ಅವನನ್ನ ದಾವೀದಪಟ್ಟಣದಲ್ಲಿ ಸಮಾಧಿ ಮಾಡಿದ್ರು. ಅವನ ಸ್ಥಾನದಲ್ಲಿ ಅವನ ಮಗ ಅಮಚ್ಯ ರಾಜನಾದ.+

ಪಾದಟಿಪ್ಪಣಿ

ಅಥವಾ “ಚೀಲದಲ್ಲಿ ಹಾಕಿ.”
ಅಕ್ಷ. “ಹಜಾಯೇಲ ಯೆರೂಸಲೇಮಿನ ವಿರುದ್ಧ ತನ್ನ ಮುಖ ತಿರುಗಿಸಿದ.”