ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 1 2023 | ಒಳ್ಳೇ ಮಾನಸಿಕ ಆರೋಗ್ಯಕ್ಕೆ ಸಹಾಯ ಎಲ್ಲಿಂದ?

ಲೋಕದಾದ್ಯಂತ ಲಕ್ಷಾಂತರ ಜನ್ರು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಕಷ್ಟಪಡ್ತಿದ್ದಾರೆ. ದೊಡ್ಡವರಿಗೆ, ಚಿಕ್ಕವರಿಗೆ, ಶ್ರೀಮಂತರಿಗೆ, ಬಡವರಿಗೆ, ಓದು-ಬರಹ ಗೊತ್ತಿಲ್ಲದವ್ರಿಗೆ ಮತ್ತು ಗೊತ್ತಿರೋರಿಗೆ, ಬೇರೆಬೇರೆ ದೇಶ, ಸಂಸ್ಕೃತಿ ಮತ್ತು ಧರ್ಮದವರಿಗೆ ಎಲ್ರಿಗೂ ಈ ಸಮಸ್ಯೆ ಕಾಡ್ತಾ ಇದೆ. ಮಾನಸಿಕ ಆರೋಗ್ಯದ ಸಮಸ್ಯೆ ಅಂದ್ರೇನು ಮತ್ತು ಇದ್ರಿಂದ ಹೇಗೆ ಜನ್ರಿಗೆ ತೊಂದ್ರೆ ಆಗ್ತಿದೆ? ಇದ್ರಿಂದ ಕಷ್ಟಪಡ್ತಾ ಇರೋರು ಸರಿಯಾದ ಚಿಕಿತ್ಸೆ ಪಡ್ಕೊಳ್ಳೋದು ಯಾಕೆ ಮುಖ್ಯ ಮತ್ತು ಬೈಬಲ್‌ ಹೇಗೆ ಅವ್ರಿಗೆ ಸಹಾಯ ಮಾಡುತ್ತೆ ಅಂತ ಈ ಪತ್ರಿಕೆ ವಿವರಿಸುತ್ತೆ.

 

ಲೋಕದಲ್ಲಿರೋ ಮಾನಸಿಕ ಆರೋಗ್ಯದ ಬಿಕ್ಕಟ್ಟು

ಮಾನಸಿಕ ಆರೋಗ್ಯದ ಸಮಸ್ಯೆ ವಯಸ್ಸು, ಸಂಸ್ಕೃತಿ ಅಂತ ನೋಡದೇ ಯಾರಿಗೆ ಬೇಕಾದ್ರೂ ಬರಬಹುದು. ನಿಮ್ಮ ಮಾನಸಿಕ ಆರೋಗ್ಯಕ್ಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ ಅಂತ ನೋಡಿ.

ದೇವರಿಗೆ ನಿಮ್ಮ ಬಗ್ಗೆ ಕಾಳಜಿ ಇದೆ.

ಯೆಹೋವ ದೇವರಿಗಿಂತ ಚೆನ್ನಾಗಿ ನಮ್ಮ ಯೋಚನೆ ಮತ್ತು ಭಾವನೆಗಳನ್ನ ಅರ್ಥಮಾಡಿಕೊಳ್ಳಲು ಯಾರಿಗೂ ಆಗಲ್ಲ ಅಂತ ನಾವು ಹೇಗೆ ಹೇಳಬಹುದು?

1| ಪ್ರಾರ್ಥನೆ—“ನಿಮಗಿರೋ ಚಿಂತೆಯನ್ನೆಲ್ಲಾ ದೇವರ ಮೇಲೆ ಹಾಕಿ”

ನಿಮಗಿರೋ ಚಿಂತೆಗಳ ಬಗ್ಗೆ ದೇವರ ಹತ್ರ ಪ್ರಾರ್ಥನೆಯಲ್ಲಿ ನಿಜವಾಗ್ಲೂ ಹೇಳಬಹುದಾ? ಆತಂಕದ ಸಮಸ್ಯೆ ಇರೋರಿಗೆ ಪ್ರಾರ್ಥನೆ ಮಾಡೋದ್ರಿಂದ ಏನೆಲ್ಲಾ ಸಹಾಯ ಸಿಗುತ್ತೆ?

2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’

ನಮ್ಮ ಮನಸ್ಸಲ್ಲಿರೋ ನೋವುಗಳು ಭವಿಷ್ಯದಲ್ಲಿ ಇರಲ್ಲ ಅಂತ ಬೈಬಲ್‌ ಮಾತು ಕೊಡುತ್ತೆ.

3 | ಬೈಬಲ್‌ನಲ್ಲಿರೋ ಉದಾಹರಣೆಗಳು

ಬೈಬಲ್‌ನಲ್ಲಿ ನಮ್ಮ ತರದ ಭಾವನೆಗಳಿದ್ದ ಪುರುಷ ಮತ್ತು ಸ್ತ್ರೀಯರ ನಿಜವಾದ ಜೀವನ ಕಥೆಗಳಿವೆ. ಅದನ್ನ ಓದುವಾಗ ನಮ್ಮಲ್ಲಾಗೋ ಕಳವಳ, ಆತಂಕ ನಮಗೆ ಮಾತ್ರ ಅಲ್ಲ, ಅವ್ರಿಗೂ ಬಂದಿತ್ತು ಅಂತ ನಾವು ತಿಳಿದುಕೊಳ್ತೀವಿ.

4 | ಬೈಬಲ್‌ನಲ್ಲಿರೋ ಸಲಹೆಗಳು

ಮನಸ್ಸಿಗೆ ಖುಷಿ ಕೊಡೋ ಬೈಬಲ್‌ ಉದಾಹರಣೆಗಳನ್ನ ಓದೋದ್ರಿಂದ ಮತ್ತು ಚಿಕ್ಕಚಿಕ್ಕ ಗುರಿಗಳನ್ನ ಇಡೋದ್ರಿಂದ ಮಾನಸಿಕ ಆರೋಗ್ಯದ ಸಮಸ್ಯೆಗಳನ್ನ ನಿಭಾಯಿಸೋಕೆ ಸುಲಭ ಆಗುತ್ತೆ.

ಮಾನಸಿಕ ಆರೋಗ್ಯದ ಸಮಸ್ಯೆ ಇರೋರಿಗೆ ಸಹಾಯ ಮಾಡಿ

ಮಾನಸಿಕ ಆರೋಗ್ಯದ ಸಮಸ್ಯೆಯನ್ನ ಎದುರಿಸ್ತಿರೋ ನಿಮ್ಮ ಸ್ನೇಹಿತನಿಗೆ ಬೆಂಬಲವಾಗಿ ನಿಲ್ಲಿ.