ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’

2 | ‘ಬೈಬಲ್‌ನಲ್ಲಿರೋ ಸಾಂತ್ವನದ ಮಾತುಗಳು’

ಬೈಬಲ್‌ ಹೀಗೆ ಹೇಳುತ್ತೆ: “ಹಿಂದಿನ ಕಾಲದಲ್ಲಿ ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ, ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮನ್ನರಿಗೆ 15:4.

ಇದರ ಅರ್ಥ ಏನು

ಬೈಬಲ್‌ನಲ್ಲಿರೋ ಮಾತುಗಳು ನಮಗೆ ಸಾಂತ್ವನ ಕೊಟ್ಟು, ಬೇಡದೇ ಇರೋ ವಿಷ್ಯಗಳನ್ನ ಯೋಚಿಸದೇ ಇರೋಕೆ ಸಹಾಯ ಮಾಡುತ್ತೆ. ನಮ್ಮ ಮನಸ್ಸಲ್ಲಿರೋ ನೋವುಗಳು ಕೂಡ ಭವಿಷ್ಯದಲ್ಲಿ ಇರಲ್ಲ ಅಂತ ಬೈಬಲ್‌ ಮಾತು ಕೊಡುತ್ತೆ.

ಇದು ಹೇಗೆ ಸಹಾಯ ಮಾಡುತ್ತೆ

ನಮ್ಮೆಲ್ಲರಿಗೂ ಒಂದಲ್ಲಾ ಒಂದು ಚಿಂತೆ ಇದ್ದೇ ಇದೆ. ಆದ್ರೆ ಖಿನ್ನತೆ ಮತ್ತು ಆತಂಕದ ಸಮಸ್ಯೆ ಇರೋರಿಗೆ ನೋವು ತುಂಬಿದ ಭಾವನೆಗಳು ಒಂದೊಂದು ಕ್ಷಣನೂ ಕಿತ್ತು ತಿನ್ನುತ್ತೆ. ಇಂಥವ್ರಿಗೆ ಬೈಬಲ್‌ ಸಹಾಯ ಮಾಡುತ್ತಾ?

  • ಕಹಿ ಭಾವನೆಗಳಿಂದ ಹೊರಗೆ ಬರೋಕೆ ಬೈಬಲ್‌ನಲ್ಲಿರೋ ಒಳ್ಳೇ ಮಾತುಗಳು ಸಹಾಯ ಮಾಡುತ್ತೆ. (ಫಿಲಿಪ್ಪಿ 4:8) ಅದ್ರಲ್ಲಿರೋ ಸಾಂತ್ವನದ ಮತ್ತು ಹಿತಕರ ಮಾತುಗಳು ನಮ್ಮ ಭಾವನೆಗಳನ್ನ ನಿಯಂತ್ರಣದಲ್ಲಿ ಇಡೋಕೆ ನೆರವಾಗುತ್ತೆ.—ಕೀರ್ತನೆ 94:18, 19.

  • ನಾವು ಯೋಗ್ಯತೆ ಇಲ್ಲದವರು ಅನ್ನೋ ಭಾವನೆಯನ್ನ ತೆಗೆದುಹಾಕೋಕೆ ಬೈಬಲ್‌ ಸಹಾಯ ಮಾಡುತ್ತೆ.—ಲೂಕ 12:6, 7.

  • ನಾವು ಒಂಟಿಯಲ್ಲ ಮತ್ತು ನಮ್ಮನ್ನ ಸೃಷ್ಟಿ ಮಾಡಿರೋ ದೇವರು ನಮ್ಮ ಜೊತೆ ಇದ್ದಾನೆ ಅನ್ನೋ ಧೈರ್ಯ ಬೈಬಲ್‌ನಲ್ಲಿರೋ ಮಾತುಗಳಿಂದ ಸಿಗುತ್ತೆ.—ಕೀರ್ತನೆ 34:18; 1 ಯೋಹಾನ 3:19, 20.

  • ನಮ್ಮ ಕಹಿ ನೆನಪುಗಳನ್ನೆಲ್ಲ ದೇವರು ತೆಗೆದುಹಾಕ್ತಾನೆ ಅಂತ ಬೈಬಲ್‌ ಮಾತು ಕೊಡುತ್ತೆ. (ಯೆಶಾಯ 65:17; ಪ್ರಕಟನೆ 21:4) ಈ ಆಶ್ವಾಸನೆಯನ್ನ ನಾವು ಮರೆಯದೇ ಇದ್ರೆ ನಮ್ಮ ಮನಸ್ಸಲ್ಲಿರೋ ನೋವನ್ನ ನಿಭಾಯಿಸೋಕೆ ಆಗುತ್ತೆ.